ಕಡಬ ತಾಲೂಕಿನಲ್ಲಿ ಆನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಲ್ಲಿಯ ಗೋಳಿತೊಟ್ಟು, ಅಂಭರ್ಜೆ ನಿವಾಸಿ ವೀರಪ್ಪ ಪೂಜಾರಿ ಅವರ ತೋಟದಲ್ಲಿ ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬಾಳೆ ಕೃಷಿ ಬೆಳೆ ನಾಶವಾಗಿರುವ ಬಗ್ಗೆ ವರದಿಯಾಗಿದೆ. ರಾತ್ರಿ ವೇಳೆ ತೋಟಕ್ಕೆ ಆನೆ ನುಗ್ಗಿ 25ಕ್ಕೂ ಹೆಚ್ಚಿನ ಬಾಳೆಗಿಡ ನಾಶಮಾಡಿದೆ. ಸುತ್ತಮುತ್ತಲಿನ ನಿವಾಸಿಗಳು ಶಾಲೆಗೆ ಹೋಗುವ ಮಕ್ಕಳು ಭಯಭೀತರಾಗಿದ್ದಾರೆ. ಕಳೆದ 4 ದಿನಗಳಿಂದ ಕಾಡಾನೆ ಈ ಪ್ರದೇಶದಲ್ಲಿ ಸಂಚರಿಸುತ್ತಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಉಪವಲಯ ಅರಣ್ಯಅಧಿಕಾರಿ ಸುನಿಲ್, ಅರಣ್ಯ ರಕ್ಷಕ ದುರ್ಗಾ ಪ್ರಸಾದ್ ಆಗಾಗ ಈ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.




