ಯುವತಿಯೊಬ್ಬಳು ತನ್ನ ಪ್ರಿಯಕರ ಮೇಲೆ ಮುನಿಸಿಕೊಂಡು 80 ಅಡಿ ಎತ್ತರದ ಹೈಟೆನ್ನನ್ ವಿದ್ಯುತ್ ಟವರನ್ನು ಏರಿ ರಂಪಾಟ ನಡೆಸಿರುವ ವಿಚಿತ್ರ ಘಟನೆ ಚತ್ತೀಸ್ ಗಡದ ಗೌರೆಲಾ ಪೇಂದ್ರ ಮರ್ವಾಹಿ ಜಿಲ್ಲೆಯಲ್ಲಿ ನಡೆದಿದೆ.

ಪ್ರಿಯಕರನ ಸಮಾಧಾನದ ಮಾತುಗಳನ್ನು ಕೇಳಿಸಿಕೊಳ್ಳದ ಪ್ರಿಯತಮೆ 80 ಅಡಿ ಎತ್ತರದ ವಿದ್ಯುತ್ ಟವರ್‍ನ್ನು ಹತ್ತುತ್ತಿರುವುದನ್ನು ಕಂಡ ಬಾಯ್ ಫ್ರೆಂಡ್ ಕೂಡಾ ಟವರ್’ ಅನ್ನು ಹತ್ತಿದ್ದಾನೆ.
ಇವರಿಬ್ಬರ ಹುಚ್ಚಾಟವನ್ನು ಸ್ಥಳೀಯರು ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಇವರಿಬ್ಬರ ಹುಚ್ಚಾಟದ ವಿಡಿಯೋ ಸಮಾಜಿಕ ಜಾಲತಾಣ ಭಾರೀ ವೈರಲ್ ಆಗ್ತಾ ಇದೆ.



