ಕಂಬಳಬೆಟ್ಟು : ಕ್ಷುಲ್ಲಕ ಕಾರಣಕ್ಕೆ ನೆರೆಹೊರೆಯ ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಮಾನಭಂಗ ಯತ್ನ ನಡೆದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಬಳಬೆಟ್ಟು ಕಾಂಪ್ಲೆಕ್ಸ್ನಲ್ಲಿ ವಾಸವಿರುವ ಜೈನುಲ್ ಅಬೀದ್ ಅವರ ಪತ್ನಿ ಆಯಿಶನ್ ಮುಬೀನಾ ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಅದೇ ಕಾಂಪ್ಲೆಕ್ಸ್ ನಲ್ಲಿ ವಾಸವಿರುವ ಆರೋಪಿಗಳಾದ ಹನ್ನತ್ ಆಕೆಯ ಸಹೋದರಿ, ಆಕೆಯ ತಾಯಿ, ಹಾಗೂ ಹನ್ನತ್ ಮಾಡನ ವಿರುದ್ಧ ಮಾನಭಂಗ ಯತ್ನ ಪ್ರಕರಣ ದಾಖಲಾಗಿದೆ.
ವಿಟ್ಲಮುನ್ನೂರು ಗ್ರಾಮದ ಕಂಬಳಬೆಟ್ಟು ಕಾಂಪ್ಲೆಕ್ಸ್ನಲ್ಲಿ ವಾಸವಿರುವ ಮುಬೀನಾ ತನ್ನ ತವರು ಮನೆಗೆ ಹೋಗಲು ಹೊರಡುತ್ತಿದ್ದ ಸಮಯ ನೆರೆ ಮನೆಯ ನಿವಾಸಿ ಹನ್ನತ್ ಮಗಳಾದ ಮಹದಿಗೆ ಕೆಟ್ಟ ಶಬ್ದಗಳಿಂದ ಬೈಯುತ್ತಿದ್ದರು. ಈ ಬಗ್ಗೆ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಹನ್ನತ್‌ನ ಮಾವ ಮೈಮೇಲೆ ಕೈ ಹಾಕಿ ಬುರ್ಖಾವನ್ನು ಹರಿದು ಹಾಕಿ, ಮಾನಭಂಗ ಯತ್ನಿಸಿದ್ದು ಆ ಸಮಯ ಮುಬೀನಾ ನೆಲಕ್ಕೆ ಬಿದ್ದಾಗ ಹೊಟ್ಟೆಗೆ ಹನ್ನತ್ ಮತ್ತು ಆಕೆಯ ತಾಯಿ ಕಾಲಿನಿಂದ ತುಳಿದುದರಿಂದ ಗಾಯಗೊಂಡಿರುತ್ತಾರೆ.
ಗಾಯಾಳುಗಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…