ಬಂಟ್ವಾಳ ತಾಲೂಕಿನ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ವತಿಯಿಂದ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಗ್ರಾಮೋತ್ಸವ -2023 ಸೇವಾ ಸಂಭ್ರಮ ಹಾಗೂ ಗುರುವಂದನ ಕಾರ್ಯಕ್ರಮ ಇಂದು ಯಶಸ್ವಿಯಾಗಿ ನಡೆಯಿತು.
ಬೆಳಗ್ಗೆ ಶ್ರೀ ಗಣಪತಿ ಹವನ, ಶ್ರೀ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗದವರಿಂದ ದಾಸವಾಣಿ, ಬಳಿಕ ಶ್ರೀಗಳ ಪಾದಪೂಜೆ, ತುಲಾಭಾರ, ಉಯ್ಯಾಲೆ ಸೇವೆ, ಗುರುವಂದನಾ ಕಾರ್ಯಕ್ರಮ ನೆರವೇರಿತು.
ಬಳಿಕ ಸಭಾಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಆಶೀರ್ವಾಚನ ನೀಡಿ, ಸಂತನ ಬದುಕು ಸಂತಗಲ್ಲದು ಸಮಾಜ ಹಿತಕ್ಕೆ, ಹಾಗಾಗಿ ನಾವು ಸಮಾಜಕ್ಕಾಗಿ ಬದುಕಬೇಕು. ನಮ್ಮ ಒಳಗೆ ನಾವು ಹುಡುಕಾಟ ಮಾಡುವಂತಹ ಕಾರ್ಯವನ್ನು ಮಾಡಬೇಕು. ಆಗ ಅದು ಆಧ್ಯಾತ್ಮದ ಬದುಕು ಎಂದೆನಿಕೊಳ್ಳುತ್ತದೆ ಎಂದರು.
ಇನ್ನೂ ಈ ಕಾರ್ಯಕ್ರಮದಲ್ಲಿ ನಾಲ್ವರು ಸಾಧಕರಿಗೆ ಬಿರುದು ನೀಡಿ ಸನ್ಮಾನದ ಗೌರವಾರ್ಪಣೆ ನಡೆಯಿತು. ಆಶಕ್ತಿಗೆ ನೆರವಾಗುವ ಮಾಹಾದಾನಿ, ಮುಂಬಯಿ ಹೇರಂಬ ಕೆಮಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಸದಾಶಿವ ಶೆಟ್ಟಿ, ಕೂಳೂರು ಕನ್ಮಾನ, ಇವರು ‘ದಾನಸಿರಿ’ ಬಿರುದನ್ನು ಮುಡಿಗೇರಿಸಿಕೊಂಡರು. ಸಾಂಸ್ಕೃತಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಡಾ. ಎಂ. ಮೋಹನ್ ಆಳ್ವ ಅವರು ‘ವಿದ್ಯಾಸಿರಿ’ ಬಿರುದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಶಂಕರ್ ಶಾನುಭೋಗ್ ಅವರು ಮುಕುಟಕ್ಕೆ ‘ಗಾನಸಿರಿ’ ಬಿರುದು ಮತ್ತೊಂದು ಗರಿಮೆಯಾಗಿದೆ. ಇನ್ನೂ ಹದಿನಾರು ಸಾವಿರಕ್ಕೂ ಹೆಚ್ಚಿನ ಜನರಿಗೆ ಉದ್ಯೋಗವನ್ನು ನೀಡಿರುವ ಶಶಿಧರ್ ಶೆಟ್ಟಿ ಬರೋಡ ಅವರಿಗೆ ‘ಸೇವಾ ಸಿರಿ’ ಬಿರುದನ್ನು ನೀಡಿ ಗೌರವಿಸಲಾಯಿತು.
ಬಳಿಕ ಮುಂಬಯಿ ಹೇರಂಬ ಕೆಮಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ, ಕೊಡುಗೈದಾನಿ ಸದಾಶಿವ ಶೆಟ್ಟಿ ಕನ್ಯಾನ ಅವರು ಮಾತಾನಾಡಿ, ತುಳುನಾಡಿನ ಪುಣ್ಯ ಮಣ್ಣಿನಲ್ಲಿ ನಾನು ಹುಟ್ಟಿದ್ದು ಪೂರ್ವಜನ್ಮದ ಪುಣ್ಯವಾಗಿದೆ. ಆದರೆ ಸಮಾಜದಲ್ಲಿ ಹಿಂಸಾಚಾರ ಅನಾಗರಿಕ ತತ್ವಗಳು ಮನಸ್ಸಿಗೆ ವೇದನೆ ಕೊಡುವಂತಹ ವಿಚಾರವಾಗಿದೆ. ಬೇರೆ ಧರ್ಮದಲ್ಲಿ ಅವರ ಮಕ್ಕಳಿಗೆ ಚಿಕ್ಕನಿಂದಲೇ ದೇವರ ಬಗ್ಗೆ ಭಯ ಹುಟ್ಟಿಸುವ ಕೆಲಸವನ್ನು ಅವರ ಶಿಕ್ಷಣಗಳು ಮಾಡುತ್ತದೆ. ಆದರೆ ನಮ್ಮ ಧರ್ಮದಲ್ಲಿ ಯಾವುದೇ ಭಯವಿಲ್ಲ, ಹಾಗಾಗಿ ಅತ್ಯಾಚಾರದಂತಹ ಕೃತ್ಯಗಳು ನಡೆಯುತ್ತಿದೆ ಇದಕ್ಕೇಲ್ಲ ಕಾರಣ ಕಾನೂನಿನ ಭಯವಿಲ್ಲದೇ ಇರುವುದು ಎಂದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು ಮಾತಾನಾಡಿ, 11 ವರ್ಷದಿಂದ ನಾನು ಈ ಕಾರ್ಯಕ್ರಮಕ್ಕೆ ಬರುತ್ತಿದ್ದೇನೆ. ಎಂದು ಸಂತಸ ವ್ಯಕ್ತಪಡಿಸಿದರು.
ಮೂಡಬಿದ್ರೆ ಆಳ್ವಾಸ್‌ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಮೋಹನ್ ಆಳ್ವ ಮಾತಾನಾಡಿ, ಹಿಂದು ಆಗಿ ಹುಟ್ಟುವ ಭಾಗ್ಯವನ್ನು ದೇವರು ಕಲ್ಪಿಸಿಕೊಟ್ಟಿದ್ದಾರೆ. ವಿದೇಶಗಳಲ್ಲಿ ನೆಲೆಸುವ ಅವಕಾಶವನ್ನು ದೇವರು ಕೊಟ್ಟರು ಈ ತುಳುನಾಡನ್ನು ಬಿಟ್ಟು ಹೋಗುವ ಮನಸ್ಸು ನನಗಿರಲ್ಲಿಲ್ಲ, ಹಲವಾರು ಸಾಮಾಜ ಮುಖಿ ಕಾರ್ಯಗಳನ್ನು ಮಾಡುವ ಅವಕಾಶವನ್ನು ಗುರುಹಿರಿಯರು ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಸಂಗೀತ ನಿರ್ದೇಶಕರಾದ ಶಂಕರ್ ಶಾನುಬೋಗ ಮಾತಾನಾಡಿ, ಹಿಂದುಗಳ ಮೇಲೆ ತುಂಬಾನೆ ಕೆಟ್ಟ ದೃಷ್ಠಿ ಬೀಳುತ್ತಿದೆ. ಪ್ರತಿ ಕಟ್ಟ ಶಕ್ತಿಗಳ ವಿರುದ್ದ ದತ್ತಾತ್ರೇಯ ಸ್ವಾಮಿ ನಿಂತು, ಹಿಂದು ಧರ್ಮವನ್ನು ಉಳಿಸಲಿ ಎಂದರು.
ಶಶಿಕ್ಯಾಟರಿಂಗ್ ಸರ್ವಿಸಸ್ ಆಡಳಿತ ನಿರ್ದೇಶಕ ಶಶಿಧರ ಬಿ. ಶೆಟ್ಟಿ ಬರೋಡ ಮಾತಾನಾಡಿ, ಸ್ವಾಮೀಜಿಯವರ ಪ್ರತಿ ಮಾತಿನಲ್ಲೂ ಒಂದು ಅರ್ಥವಿರುತ್ತದೆ ಈ ಬಗ್ಗೆ ನನಗೆ ಅನುಭವವಾಗಿದೆ ಎಂದು ಹೇಳಿದರು.
ಇನ್ನೂ ಈ ಕಾರ್ಯಕ್ರಮದಲ್ಲಿ, ಸಾಧ್ಯ ಮಾತಾನಂದಮಯಿ, ಮುಂಬಯಿ ಹೈಟೆಕ್ ಇಲೆಕ್ಟಿಫಿಕೇಶನ್ ಇಂಜಿನಿಯರಿAಗ್ ಆಡಳಿತನಿರ್ದೇಶಕ ರವಿನಾಥ್ ವಿ. ಶೆಟ್ಟಿ ಅಂಕೇಶ್ವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿರುವ ಖ್ಯಾತ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರನ್ನು ದಕ್ಷಿಣ…
ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಕಲ್ಕೂರ ಪ್ರತಿಷ್ಠಾನದ ಕಾರಂತ ಪ್ರಶಸ್ತಿ ಸಮಿತಿ ನೀಡುವ 2026ನೇ ಸಾಲಿನ…
ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆಯೊಂದು ಡಿಕ್ಕಿಯಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಅನಿಲ ಸಮೀಪ ನಡೆದಿದೆ. ಹೆದ್ದಾರಿಯಲ್ಲಿ ಕಾರು ಸಂಚರಿಸುತ್ತಿದ್ದ…
ಅಂತಾರಾಷ್ಟ್ರೀಯ ಹಾಗೂ ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನ ತೀರಾ ಕಡಿಮೆಯಾಗಿದ್ದು, ಇತರ…
ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…