11 ವರ್ಷಗಳ ಹಿಂದೆ ಅತ್ಯಾಚಾರ ನಡೆದು ಕೊಲೆಯಾದ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಲು ಸರ್ಕಾರ ಮರುತನಿಖೆ ಕೈಗೊಳ್ಳಬೇಕು ಹಾಗೂ ನೈಜ ಆರೋಪಿಗಳ ಬಂಧನವಾಗಬೇಕೆ0ದು ಒತ್ತಾಯಿಸಿ ಆಗಸ್ಟ್ 14 ರಂದು ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ‘ನಮ್ಮ ನಡೆ ನ್ಯಾಯದ ಕಡೆ’ ಬೃಹತ್ ಕಾಲ್ನಾಡಿಗೆ ಜಾಥ ಹಾಗೂ ರಸ್ತೆ ತಡೆ ನಡೆಯಲಿದೆ.

ಸೌಜನ್ಯಳಿಗೆ ನ್ಯಾಯ ಸಿಗುವಂತೆ ಮಾಡಲು 1 ಗಂಟೆ ಬಂದ್ ಮಾಡುವಂತೆ ಪುತ್ತಿಲ ಪರಿವಾರ ಮನವಿ ಮಾಡಿದ್ದಾರೆ.
ಪುತ್ತೂರು ಪೇಟೆಯ ವರ್ತಕರು ಸಹೋದರಿ ಸೌಜನ್ಯಳ ಸಾವಿಗೆ ನ್ಯಾಯಕ್ಕಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಅಂದು ಬೆಳಿಗ್ಗೆ 10 ಗಂಟೆಯಿAದ 11 ಗಂಟೆಯವರೆಗೆ ಸ್ವಯಂಪ್ರೇರಿತ ಬಂದ್ ಮಾಡುವಂತೆ ಪುತ್ತಿಲ ಪರಿವಾರ ವತಿಯಿಂದ ಪುತ್ತೂರಿನ ಸಮಸ್ತ ವ್ಯಾಪಾರಸ್ಥರಲ್ಲಿ ಮನವಿ ಮಾಡಲಾಗಿದೆ.
ಆಗಸ್ಟ್ 14ರ ಸೋಮವಾರದಂದು ಬೆಳಿಗ್ಗೆ 9.30 ಕ್ಕೆ ದರ್ಬೆ ವೃತ್ತದಿಂದ ಕಾಲ್ನಡಿಗೆ ಜಾಥ ಪುತ್ತೂರು ಬಸ್ ನಿಲ್ದಾಣದವರೆಗೆ ತೆರಳಿ ಅಲ್ಲಿ ರಸ್ತೆ ತಡೆ ಮತ್ತು ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.



