ಬೆಂಗಳೂರಿನಲ್ಲಿ ನಡೆದ ಮಿಸ್ಸಸ್ ಇಂಡಿಯಾ ಕರ್ನಾಟಕ -2023 ಸ್ಪರ್ಧೆಯಲ್ಲಿ ಮಂಗಳೂರಿನ ಸೌಮ್ಯಲತಾ ನಾಲ್ಕನೇ ರನ್ನರ್ ಆಪ್ ಆಗಿ ಹೊರಹೊಮ್ಮಿದ್ದಾರೆ.

ಪಾತ್ ವೇ ಎಂಟರ್ ಪ್ರೈಸಸ್ ಎಂಡ್ ಮೆರ್ಸಿ ಬ್ಯುಟಿ ಆಕಾಡೆಮಿ ಲೇಡಿಸ್ ಸೆಲೂನ್ ಪ್ರಯೋಜಕತ್ವದಲ್ಲಿ ನಡೆದ ಸಿಟಿ ಹಾಗೂ ಜಿಲ್ಲಾ ಮಟ್ಟದ ಆಡೀಶನ್ ನಲ್ಲಿ ಸೌಮ್ಯರವರು ಭಾಗವಹಿಸಿ, ಮಿಸ್ಸಸ್ ಇಂಡಿಯಾ ಕರ್ನಾಟಕ -2023 ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡ್ರು.
ಇನ್ನೂ 20 ರಿಂದ 40 ವಯೋಮಾನದಲ್ಲಿ ನಡೆದ ಮಿಸ್ಸಸ್ ಇಂಡಿಯಾ ಕರ್ನಾಟಕ -2023 ಸ್ಪರ್ಧೆಯಲ್ಲಿ 15 ಮಂದಿ ಭಾಗವಹಿಸಿದ್ದು, ನಾಲ್ಕನೇ ಸ್ಥಾನವನ್ನು ಮಂಗಳೂರಿನ ಬೆಡಗಿ ಸೌಮ್ಯಲತಾ ಮುಡಿಗೇರಿಸಿಕೊಂಡಿದ್ದಾರೆ.









