ನೆಲ್ಯಾಡಿ: ಮಹಿಳೆ ಜೊತೆ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ್ದು, ವಿಚಾರಿಸಲು ಹೋದ ಮಹಿಳೆಯ ಪತಿಗೆ ತಲವಾರು ತೋರಿಸಿ ಜೀವಬೆದರಿಕೆಯೊಡ್ಡಿದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.

ಕಡಬ ನಿವಾಸಿ ಡೆಲಿಶಾ ಡೆಸಾ (23) ಎಂಬವರು ಕೆಲಸ ಮುಗಿಸಿ ಬರುತ್ತಿದ್ದ ವೇಳೆ ನೆಲ್ಯಾಡಿಯಲ್ಲಿ ಗಂಡನ ಸ್ನೇಹಿತನಾದ ಲಕ್ಷ್ಮೀನಾರಾಯಣ ಎಂಬಾತ ಡೆಲಿಶಾ ಡೆಸಾ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ.
ವಿಷಯ ತಿಳಿದು ವಿಚಾರಿಸಲು ಹೋದ ಮಹಿಳೆಯ ಪತಿಗೆ ಆರೋಪಿ ತಲವಾರು ತೋರಿಸಿ ಕೊಲ್ಲುವುದಾಗಿ ಜೀವಬೆದರಿಕೆ ಒಡ್ಡಿ ಹಲ್ಲೆ ನಡೆಸಿದ್ದಾನೆ.
ಇನ್ನೂ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



