ಮುಲ್ಕಿ: ತೋಕೂರು ಸುಬ್ರಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಆ.06 ರಂದು ಆಟಿದ ನೆನಪು ಕಾರ್ಯಕ್ರಮ 2023 ನಡೆದಿದೆ.
ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಇವರುಗಳ ಮಾರ್ಗದರ್ಶನದಲ್ಲಿ ಜಿಲ್ಲಾ, ರಾಜ್ಯ, ತುಳು ಸಾಹಿತ್ಯ ಅಕಾಡೆಮಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಬ್ರಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು ಇದರ ಆಶ್ರಯದಲ್ಲಿ ಆಟಿದ ನೆನಪು ಕಾರ್ಯಕ್ರಮ ಜರಗಿತು.
ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಹಿಳಾ ಸದಸ್ಯರಾದ ಪ್ರಮೀಳಾ, ಪವಿತ್ರ, ಸುಷ್ಮಾ, ಪಾರ್ಥನೆ ಸಲ್ಲಿಸಿದ್ರು. ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಕುಲಾಲ್ ಅತಿಥಿ ಗಣ್ಯರನ್ನು ಮತ್ತು ಸಭಿಕರನ್ನು ಸ್ವಾಗತಿಸಿ, ವೇದಿಕೆಯಲ್ಲಿದ್ದ ಗಣ್ಯರನ್ನು ತುಳುನಾಡಿನ ಸಂಸ್ಕೃತಿಯ ಬಿಂಬಿಸುವ, ಶಾಲು ಹಾಕಿ, ಮುಟ್ಟಾಲೆ, ಸಿಹಿಯಾಲ, ವೀಳ್ಯದೆಲೆ ಅಡಿಕೆ ನೀಡಿ ಸ್ವಾಗತಿಸಲಾಯಿತು.
ನೆಹರು ಯುವ ಕೇಂದ್ರದ ಆಡಳಿತ ಅಧಿಕಾರಿ ಜಗದೀಶ್ ಕೆ. ವೇದಿಕೆಯಲ್ಲಿದ ಅತಿಥಿಗಣ್ಯರೊಂದಿಗೆ ದೀಪ ಪ್ರಜ್ವಲಿಸಿ, ಹಲಸಿನ ಹಣ್ಣನ್ನು ತುಂಡರಿಸಿ, ಸಾಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ ಆಟಿ ತಿಂಗಳ ಕಟ್ಟುಪಾಡುಗಲು ತುಲು ನಾಡಿನ ವಿಶಿಷ್ಟ ಸಂಸ್ಕೃತಿ ಪ್ರಸಂಶಿಸಿದರು. ಅಲ್ಲದೆ ತುಳುನಾಡಿನ ಸಂಪ್ರದಾಯಗಳನ್ನು ಬಿಂಬಿಸುವ ಇಂಥ ಆಚರಣೆಗಳನ್ನು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ವೀಣಾ ಟಿ.ಶೆಟ್ಟಿ ನಿವೃತ್ತ ಮಹಾ ಪ್ರಬಂಧಕರು, ಎಂ ಆರ್ ಪಿ ಎಲ್ ,ಓ ಎನ್ ಜಿ ಸಿ ಮಂಗಳೂರು ಇವರು ಆಷಾಢ ತಿಂಗಳ ಆಚಾರ ವಿಚಾರಗಳು, ನಮ್ಮ ಪೂರ್ವಜರು ಆಟಿ ತಿಂಗಳ ಜೀವನ ಕ್ರಮ ಹೇಗಿತ್ತು ಇಂದಿನ ಪೀಳಿಗೆಗೆ ಇವೆಲ್ಲವುಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯತೆಗಳ ಬಗ್ಗೆ ಮಾಹಿತಿ ನೀಡಿದರು.
ತದನಂತರ ಎಂ ಆರ್ ಪಿ ಎಲ್, ಓ ಎನ್ ಜಿ ಸಿ ಕರ್ಮಾಚಾರಿ ಸಂಘದ ಅಧ್ಯಕ್ಷರಾದ ನಿತಿನ್ ಹೆಚ್ ಯು ಮಾತನಾಡಿ ಅನಾದಿಕಾಲದಿಂದಲೂ ತುಳುನಾಡಿನಲ್ಲಿ ಆಟಿ ತಿಂಗಳಿಗೆ ವಿಶೇಷವಾದ ಮಹತ್ವ ಇದೆ ಆರೋಗ್ಯಕರ ಹಾಗೂ ನೈಸರ್ಗಿಕ ಸೊಪ್ಪು ತರಕಾರಿಗಳ ವಿಶಿಷ್ಟ ಆಹಾರ ಪದಾರ್ಥಗಳ ಆಟಿ ತಿಂಗಳಲ್ಲಿ ತಯಾರಿಸಲಾಗುತ್ತದೆ ಇಂತಹ ವಿಶಿಷ್ಟ ಆಚರಣೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗು ಅಂತ ಆದ್ಯತೆ ನೀಡಬೇಕು ಎಂದರು.
ಸಭಾಂಗಣದಲ್ಲಿ ಬೆಲ್ಲ ,ಉರಿ ಕಡಲೆ, ಕರಿ ಮೆಣಸಿನ ಕಷಾಯ ಆಥಿತ್ಯ ನೀಡಿ, ತುಳುನಾಡಿನ ಆಟಿ ತಿಂಗಳಿನಲ್ಲಿ ತಯಾರಿಸಿದ ವಿವಿಧ 36 ಬಗೆಯ ಆಹಾರ ಪದಾರ್ಥಗಳು ಸುಮಾರು 250 ಜನರಿಗೆ ಉಣಬಡಿಸಲಾಯಿತು. ತುಳುನಾಡಿನ ಜನಜೀವನದ ಹಿರಿಮೆಯನ್ನು ನೆನಪಿಸುವ ಹಳೆಯ ಪರಿಕರಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು.
ಇನ್ನೂ ಈ ಕಾರ್ಯಕ್ರಮದಲ್ಲಿ ಸ್ಪೋರ್ಟ್ಸ್ ಕ್ಲಬ್ ನ ಗೌರವ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಬೇಕಲ್, ಅಧ್ಯಕ್ಷರಾದ ಜಗದೀಶ್ ಕುಲಾಲ್, ಮಹಿಳಾ ಕಾರ್ಯಧ್ಯಕ್ಷ ಯಶೋಧ ದೇವಾಡಿಗ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸುಗಂಧಿ ಡಿ.ಕೊಂಡಾನ, ಸದಸ್ಯರಾದ ವಿನೋದ್ ಕುಮಾರ್ ಬೋಳ್ಳೂರು, ಬಾಳ ಗ್ರಾಮ ಪಂಚಾಯಿತಿನ ಕಾರ್ಯದರ್ಶಿ ಲೋಕನಾಥ್ ಭಂಡಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ದಾಸ್, ಸಂತೋಷ್ ಕುಮಾರ್, ಹೇಮನಾಥ ಅಮೀನ್, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರಿದಾಸ್ ಭಟ್, ಸದಸ್ಯರಾದ ಯೋಗೀಶ್ ಕೋಟ್ಯಾನ್, ಲಯನ್ಸ್ ಮತ್ತು ಲಿಯೋ ಕ್ಲಬ್ ಇದರ ಮಾಜಿ ಅಧ್ಯಕ್ಷರಾದ ವಿಜಯಕುಮಾರ್ ಶೆಟ್ಟಿ, ಸುಮಿತ್ರ ಶೆಟ್ಟಿ, ಸ್ಪೋರ್ಟ್ಸ್ ಕ್ಲಬ್ಬಿನ ಗೌರವ ಮಾರ್ಗದರ್ಶಕರಾದ ಶಿವಾನಂದ ಪದ್ಮಶಾಲಿ, ನಾರಾಯಣ್ ಜಿ.ಕೆ, ಲಕ್ಷ್ಮಣ ಸಾಲ್ಯಾನ್ ಕೆರೆಕಾಡು, ದಿನಕರ್ ಲೈಟ್ ಹೌಸ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸದಸ್ಯರು, ಮಕ್ಕಳು ಹಾಗೂ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಹಿಳಾ ಜೊತೆ ಕಾರ್ಯದರ್ಶಿ ಶ್ರೀಮತಿ ಸುರೇಖಾ ಕಲ್ಲಾಪು, ಆಟಿ ತಿನಸುಗಳ, ಅವುಗಳನ್ನು ತಯಾರಿಸಿ ತಂದವರ ಪಟ್ಟಿಯನ್ನು ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ದೀಪಕ್ ಸುವರ್ಣ ವಂದಿಸಿದರು. ನಿಕಟ ಪೂರ್ವ ಕಾರ್ಯ ಅಧ್ಯಕ್ಷರು ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…