ಮೂವರು ಬಿಜೆಪಿ ಬೆಂಬಲಿತ ಸದಸ್ಯರು ಕಾಂಗ್ರೆಸ್ ಸೇರ್ಪಡೆಗೊಂಡು ಕಾಂಗ್ರೆಸ್ ತನ್ನ ಬಲವನ್ನು 9 ಕ್ಕೆ ಹೆಚ್ಚಿಸಿಕೊಂಡು ಆಡಳಿತದ ಚುಕ್ಕಾಣಿ ಹಿಡಿಯಿತು.

ಕಳೆದ ಬಾರಿ ಕಾಂಗ್ರೆಸ್ 7 ಬಿಜೆಪಿ 7 ಸಮಬಲ ಸ್ಥಾನ ಪಡೆದು ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನದ ಅವಕಾಶವನ್ನು ತನ್ನದಾಗಿಸಿಕೊಳ್ಳಲು ಬಿಜೆಪಿ ಆಪರೇಶನ್ ಕಮಲದ ಮೂಲಕ ತನ್ನ ಬಲವನ್ನು 8 ಕ್ಕೆ ಹೆಚ್ಚಿಸಿಕೊಂಡಿತ್ತು.
ಆದರೆ ರಾತ್ರೊ ರಾತ್ರಿ ನಡೆದ ಕಾವು ಹೇಮನಾಥ್ ಶೆಟ್ಟಿಯವರಿಂದ ನಡೆದ ರಾಜಕೀಯ ಕ್ಷಿಪ್ರ ಬೆಳವಣಿಗೆ ಮೂಲಕ ಮರುದಿನ ಚುನಾವಣೆ ನಡೆದಾಗ 7, 7 ಸಮಬಲವೇ ಕಾಯ್ದುಕೊಂಡಿತ್ತು. ಟಾಸ್ ಮೂಲಕ ಅಧಿಕಾರ ಬಿಜೆಪಿ ಪಾಲಾಯಿತು.
ಈ ಬಾರಿ ಬಿಜೆಪಿಯಿಂದ ಅಸಮಾಧಾನಗೊಂಡಿದ್ದ ಹರೀಶ್, ಶ್ಯಾಮಲ ಮತ್ತು ದೇವಕಿ ಎಂಬ ಮೂವರು ಬಿಜೆಪಿ ಬೆಂಬಲಿತ ಸದಸ್ಯರು ಕೆದಿಲ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಶೆಟ್ಟಿ ಕಲ್ಲಾಜೆ , ಗ್ರಾಮ ಪಂಚಾಯತಿ ಸದಸ್ಯರಾದ ಅಜೀಝ್ ಸತ್ತಿಕಲ್ಲು , ಮತ್ತು ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷರು ಫಾರೂಕ್ ಬಾಯಬೆ ಜೊತೆ ಸಂಪರ್ಕದಲ್ಲಿದ್ದುಕೊಂಡು ಇಂದು ಬೆಳಿಗ್ಗೆ ಕ್ಷೇತ್ರದ ಶಾಸಕರು ಅಶೋಕ್ ಕುಮಾರ್ ರೈ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಅಧ್ಯಕ್ಷ ಸ್ಥಾನಕ್ಕೆ ಹರೀಶ್ (ಸಾಮಾನ್ಯ ) ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿ ಫಾತುಮ್ಮ ( ಸಾಮಾನ್ಯ ಮಹಿಳೆ) ಯವರು ಬಹುಮತದಿಂದ ಆಯ್ಕೆಯಾದರು



