ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ ಹಿರಿಯ ಪ್ರಾಥಮಿಕ ಶಾಲೆ ಮಾಡನ್ನೂರು ಇಲ್ಲಿ ವಿವೇಕ ತರಗತಿ ಕೊಠಡಿಯನ್ನು ಕ್ಷೇತ್ರದ ಶಾಸಕರು ಅಶೋಕ್ ಕುಮಾರ್ ರೈ ಇವರು ದೀಪ ಬೆಳಗಿಸಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಶಿಕ್ಷಣ ಪ್ರೇಮಿ ಕಾವು ಹೇಮನಾಥ್ ಶೆಟ್ಟಿ ಸ್ಥಳೀಯ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ, ಗ್ರಾಮ ಪಂಚಾಯತಿ ಸದಸ್ಯರಾದ ದಿವ್ಯನಾಥ್ ಶೆಟ್ಟಿ ಕಾವು ಮೋನಪ್ಪ ಪೂಜಾರಿ, ಜಯಂತಿ, ಸ್ಥಳೀಯ ಪ್ರಮುಖರಾದ ಕೆ ಕೆ ಇಬ್ರಾಹಿಂ, ಮತ್ತು ಸ್ಥಳೀಯರು ಉಪಸ್ಥಿತರಿದ್ದರು.



