ಬಂಟರ ಸಂಘ ಪುತ್ತಿಗೆ ನೇತೃತ್ವದಲ್ಲಿ ಇದೇ ಬರುವ ಆ.13 ರಂದು ‘ಆಟಿದಕೂಟ ಕಾರ್ಯಕ್ರಮವು ಪುತ್ತಿಗೆ ಎಜೆಬಿ ಶಾಲಾ ವಠಾರದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳ್ಳಿದ್ದು, ಬಳಿಕ ಗ್ರಾಮ ಪಂಚಾಯತ್ ಮಟ್ಟದ ಬಂಟ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೇಳೈಸಲಿದೆ.
ಗ್ರಾಮದ ಆಜಲು ದೈವನರ್ತಕರಿಂದ ‘ಆಟಿಕಳಂಜ’ ನಡೆಯಲಿದ್ದು, ಇದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದೆ.
ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಪುತ್ತಿಗೆ ಬಂಟರ ಸಂಘದ ಗೌರವಾಧ್ಯಕ್ಷರಾದ ಸತೀಶ್ ಭಂಡಾರಿ ಕೋಳಾರು ವಹಿಸಲಿದ್ದಾರೆ. ಬಂಟ ಸಮುದಾಯದ ಸಾಧಕರಿಗೆ ಸನ್ಮಾನದ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಇನ್ನೂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಸಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಅಡ್ಡ ಸುಬ್ಬಯ್ಯ ರೈ, ಹೇರಂಬ ಇಂಡಸ್ಟಿçÃಸ್ ಮುಂಬಯಿ ಇದರ ಅಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ, ಪುತ್ತಿಗೆ ಗ್ರಾಮ ಪಂಚಾಯಿತಿ ಅಧಕ್ಷ ಡಿ. ಸುಬ್ಬಣ್ಣ ಆಳ್ವ, ಮಂಗಳೂರು ಮಾತೃ ಸಂಘದ ಆಶಾ ಜ್ಯೋತಿ ರೈ, ಮಂಗಳೂರಿನ ಸಾಗರ್ ಕನ್‌ಸ್ಟçಕ್ಷನ್‌ನ ಗಿರಿಧರ ಶೆಟ್ಟಿ ನೈಮೊಗರು ಬಾರಿಕೆ, ಬೆಳ್ಳೂರು ಮಹಿಳಾ ಸಂಘದ ಅಧ್ಯಕ್ಷೆ ಡಾ, ವಿದ್ಯಾ ಮೋಹನ್‌ದಾಸ್ ರೈ, ಅಭಿಮತ ಟಿವಿಯ ಮುಖ್ಯಸಂಪಾದಕಿ ಡಾ. ಮಮತಾ ಶೆಟ್ಟಿ, ಕಾಸರಗೋಡಿನ ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ರೈ ಪರಡಾಲಗುತ್ತು ಭಾಗಿವಹಿಸಲಿದ್ದಾರೆ. ಇನ್ನೂ ಆಟಿದ ಕೂಟದಲ್ಲಿ ಪುತ್ತಿಗೆ ಬಂಟ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.



