ಸುರತ್ಕಲ್: ಮೇಲ್ಮನೆ ಸುರತ್ಕಲ್ ವತಿಯಿಂದ ಆಟಿದ ಕೂಟ ಕಾರ್ಯಕ್ರಮ ಶನಿವಾರ ಸಂಜೆ 6.30 ರಿಂದ ನಡೆಯಿತು.
ಮೇಲ್ಮನೆ ಸದಸ್ಯರೆಲ್ಲರೂ ಸೇರಿ ಜತನದಿಂದ ಕಾಪಾಡಿಕೊಂಡು ಬಂದಿರುವ ಪುರಾತನ ಕಾಲದಲ್ಲಿ ಪೂರ್ವಜರು ಉಪಯೋಗಿಸುತ್ತಿದ್ದ ವಸ್ತುಗಳನ್ನು ಜೋಡಿಸಿಕೊಂಡು ಸಾಂಪ್ರದಾಯಿಕ ಶೈಲಿಯಲ್ಲಿ ಸಿಂಗರಿಸಿದ್ದರು.
ಸ್ಥಳೀಯ ಹಿರಿಯರಾದ ಸುಹಾಸಿನಿ, ರತ್ನ, ವಾಸಂತಿ, ಯಮುನಾ, ಸರಸು ಅವರು ಈ ಸಂದರ್ಭದಲ್ಲಿ ಆಟಿ ಆಚರಣೆಯ ಬಗ್ಗೆ ವಿವರಿಸಿದರು. ಅವರನ್ನು ಮೇಲ್ಮನೆಯ ವತಿಯಿಂದ ಶಾಲು ಹೊದೆಸಿ, ಹೂಗುಚ್ಛ ನೀಡಿ ಗೌರವಿಸಿ ಅಭಿನಂದಿಸಲಾಯಿತು.
ಆನಂತರ ಎಲ್ಲರೂ ಸೇರಿ ತಯಾರಿಸಿದ 38 ಬಗೆಯ ಆಟಿ ತಿಂಗಳಲ್ಲಿ ವಿಶೇಷವಾಗಿ ತಯಾರಿಸಲಾಗುವ ತಿನಿಸುಗಳನ್ನು ಸವಿದರು. ಹಿರಿಯರಾದ ಲಕ್ಷ್ಮಿ, ರಾಜೀವಿ, ಯಮುನಾ, ಗೀತಾ ನರೇಂದ್ರ, ಶುಭಾ ಲೋಕೇಶ್, ರೋಹಿಣಿ ವಿಶ್ವನಾಥ್, ವಾರಿಜಾ ಹಾಗೂ ಮತ್ತಿತರರು ಹಾಗೂ ಮಕ್ಕಳು, ಮೊಮ್ಮಕ್ಕಳು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹಗಳು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದ…
ಉಡುಪಿ ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್‌ವೊಂದು ಕಳವಾಗಿರುವ ಘಟನೆ ಸೆ.29ರಂದು ಬೆಳಕಿಗೆ ಬಂದಿದ್ದು,…
ಮಂಗಳೂರು ವಿಶ್ವವಿದ್ಯಾನಿಲಯದ 16 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು 2026-27ನೇ ಶೈಕ್ಷಣಿಕ ಸಾಲಿನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೋರ್ಸ್‌ಗಳನ್ನು ಮುಂದುವರಿಸಲು ಅಗತ್ಯವಿರುವಷ್ಟು ವಿದ್ಯಾರ್ಥಿಗಳು…
ಮಂಗಳೂರು ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಅಥವಾ ಶಾಶ್ವತ ಪೀಠ ಸ್ಥಾಪಿಸುವ…
ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರಿಗೆ ಗೂಡ್ಸ್ ಆಟೋ ರಿಕ್ಷಾ ಡಿಕ್ಕಿಯಾಗಿ, ತೀವ್ರವಾಗಿ ಗಾಯಗೊಂಡಿದ್ದ ಆಟೋ…
ನೇಪಾಳದಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ಸೆ.24ರಿಂದ ಈವರೆಗೆ ಕನಿಷ್ಠ…