ಬಂಟ್ವಾಳ: ಕೆ.ಎಸ್.ಅರ್.ಟಿ.ಸಿ.ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಮಂಗಳೂರಿನ ಬಂಟ್ವಾಳದ ಬೈಪಾಸ್ ಜಂಕ್ಷನ್ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ರಾಯಿ ನಿವಾಸಿ ಫ್ರಾನ್ಸಿಸ್ ಲೊಬೋ ಎಂದು ಗುರುತಿಸಲಾಗಿದೆ.

ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಫ್ರಾನ್ಸಿಸ್ ಲೋಬೋ ಅವರು ಬಂಟ್ವಾಳ ಪೇಟೆಯ ಕಡೆಯಿಂದ ಮೂಡಬಿದಿರೆಯ ಕಡೆ ಹೋಗುವ ವೇಳೆ ನಾಲ್ಕು ಮಾರ್ಗ ಕೂಡುವ ಬೈಪಾಸ್ ಜಂಕ್ಷನ್ ನಲ್ಲಿ ಅಪಘಾತ ನಡೆದಿದೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಂಟ್ವಾಳದಿಂದ ಹೈವೆಯ ಮೂಲಕ ಮೂಡಬಿದಿರೆ ರಸ್ತೆಗೆ ಏಕಾಏಕಿ ಬೈಕ್ ನುಗ್ಗಿಸಿದ ಪರಿಣಾಮವಾಗಿ ಈ ಅಪಘಾತ ಸಂಭವಿಸಿದೆ. ಬಸ್ ಚಾಲಕನಿಗೆ ಬೈಕ್ ಬರುವುದು ಗೊತ್ತಾಗದೇ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.



