ದಕ್ಷಿಣ ಕನ್ನಡ : ಮಂಗಳೂರಿನಲ್ಲಿ 2019ರ ಆಗಸ್ಟ್ 6ರಂದು ದೇಶ ಕಂಡು ಕೇಳದೆ ಭೀಕರ ತ್ಯಾಜ್ಯ ದುರಂತದಲ್ಲಿ ಸರ್ವಸ್ವವನ್ನು ಕಳೆದುಕೊಂಡ ಸಂತ್ರಸ್ತರಿಗೆ ಪೂರ್ಣ ಪ್ರಮಾಣದ ಪರಿಹಾರ ಇನ್ನೂ ಕೂಡ ಮರೀಚಿಕೆಯಾಗಿ ಉಳಿದಿದೆ.
ಘಟನೆ ಸಂಭವಿಸಿ 48 ತಿಂಗಳುಗಳ ಕಳೆದಿದ್ದು ಅಂದು ಜನಪ್ರತಿನಿಧಿಗಳು ಅಧಿಕಾರಿಗಳು ಬಂದು ಮೂರು ತಿಂಗಳ ಒಳಗಾಗಿ ಪೂರ್ಣಕಾಲಿಕ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದರು ಆದರೆ ಅದು ಇಂದಿಗೂ ಈಡೇರದೆ ಇರುವುದು ವಿಪರ್ಯಾಸ.
ಅಂದು ಭರವಸೆ ನೀಡಿದ ಜನಪ್ರತಿನಿಧಿಗಳು ಕೈ ಚೆಲ್ಲಿ ಕುಳಿತಿದ್ದಾರೆ ಅಥವಾ ಪ್ರಕರಣವನ್ನು ಮರೆತಿದ್ದಾರೆ ಅಂದು ಅಧಿಕಾರದಲ್ಲಿದ್ದ ಅಧಿಕಾರಿಗಳು ಬೇರೆಡೆ ವರ್ಗಾವಣೆ ಹೊಂದಿದ್ದಾರೆ ಅಥವಾ ನಿವೃತ್ತರಾಗಿರಬಹುದು ಅಥವಾ ಕೆಲಸ ತೊರೆದಿರುವ ಸಾಧ್ಯತೆಯೂ ಇದೆ.
ಆದರೆ ಅಂದಿನ ಭರವಸೆಯನ್ನ ನಂಬಿದ ಸಂತ್ರಸ್ತರು ತನ್ನ ಸರ್ವಸ್ವನ್ನು ಕಳಕೊಂಡು ಸಂತ್ರಸ್ತರು ಮಂಕಾಗಿದ್ದಾರೆ ಕೆಲವರು ಇಹಲೋಕವನ್ನು ತ್ಯಜಿಸಿದ್ದಾರೆ ಇನ್ನು ಕೆಲವರು ಮಾನಸಿಕ ಖಿನ್ನತೆ ಒಳಗಾಗಿದ್ದಾರೆ.
ಅಂದು ಆಡಳಿತದಲ್ಲಿದ್ದ ಜನಪ್ರತಿನಿಧಿಗಳು ಇಂದು ಪ್ರತಿಪಕ್ಷದಲ್ಲಿ ಕುಳಿತಿದ್ದಾರೆ, ಅಂದು ಪ್ರತಿಪಕ್ಷದಲ್ಲಿ ಇದ್ದವರು ಇಂದು ಆಡಳಿತ ನಡೆಸುತ್ತಿದ್ದಾರೆ. ಆದರೂ ಸಂತ್ರಸ್ತರ ಸಮಸ್ಯೆ ಬಗೆ ಹರಿದಿಲ್ಲ. ಅಂದು ಮಂದಾರ ತ್ಯಾಜ್ಯ ದುರಂತ ಸ್ಥಳಕ್ಕೆ ಭೇಟಿ ನೀಡಿದ್ದ ಮತ್ತು ಸಂತ್ರಸ್ತರಿಗೆ ಪರಿಹಾರಕ್ಕೆ ಒತ್ತಾಯಿಸಿದ್ದ ಸಿದ್ದರಾಮಯ್ಯ ಅವರು ಇಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ, ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಸಂತ್ರಸ್ತರಿಗೆ ಮಧ್ಯಂತರ ಪರಿಹಾರ ಮತ್ತು ಕೃಷಿ ಪರಿಹಾರ ದೊರಕಿರುತ್ತದೆ. ಪೂರ್ಣ ಪ್ರಮಾಣದ ಪರಿಹಾರಕ್ಕಾಗಿ ಸಂತ್ರಸ್ತರು ಕಾಯುತ್ತಿದ್ದಾರೆ.
ಧಾರ್ಮಿಕ ನಂಬಿಕೆಗಳು ತ್ಯಾಜ್ಯದ ಒಳಗೆ ಹುದುಗಿ ಹೋಗಿವೆ, ದೈವಸ್ಥಾನ ನಾಗಬನ ಕಣ್ಮರೆಯಾಗಿದೆ, ಅದು ಮರು ಸ್ಥಾಪಿಸಿಕೊಡುತ್ತೇವೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿದ್ದರು, ಅದಕ್ಕೆ ಸಂಬಂಧಪಟ್ಟವರು ಪರಿಹಾರವನ್ನು ಪಡೆದುಕೊಂಡಿಲ್ಲ, ಈಗ ಎಷ್ಟು ಬಾರಿ ಕಚೇರಿಗೆ ಅಲೆದಾಡಿದರು, ಮನವಿ ನೀಡಿದ್ರು ಸ್ಪಂದಿಸುತ್ತಿಲ್ಲ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಂಪರ್ಕಕ್ಕಾಗಿ ಅಲೆದು ಅಲೆದು ಆರೋಗ್ಯವೇ ಹಾಳಾಗಿದ್ದೇ ವಿನಹ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಂತ್ರಸ್ತ ಡಾಕ್ಟರ್ ಮಂದಾರ ರಾಜೇಶ್ ಭಟ್.
ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತನನ್ನು…
ಸೀತಾಂಗೋಳಿ–ಪೆರ್ಲ ರಸ್ತೆಯ ಪುತ್ತಿಗೆ ಮುಗುರೋಡ್‌ನಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ಅವರ ಪತ್ನಿ…
ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸುಳ್ಯ…
ಮನೆಯಲ್ಲಿ ಬಳಸಿ ಉಳಿದಿರುವ ಅಥವಾ ಬಳಕೆಯಾಗದೆ ಉತ್ತಮ ಸ್ಥಿತಿಯಲ್ಲಿರುವ ಪಾದರಕ್ಷೆಗಳನ್ನು ಬಡ ಹಾಗೂ ಪಾದರಕ್ಷೆರಹಿತ ಮಕ್ಕಳಿಗೆ ತಲುಪಿಸುವ ಉದ್ದೇಶದಿಂದ ‘ನಡಿಗೆ’…
‘ಸ್ವಚ್ಛತಾ ಹೀ ಸೇವಾ 2026’ ಕಾರ್ಯಕ್ರಮದ ಅಂಗವಾಗಿ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅ.2ರಂದು ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ…
ಕರಾವಳಿಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದರ ಬೆನ್ನಲ್ಲೇ ಉಡುಪಿ ಜಿಲ್ಲೆಯ ಪ್ರಮುಖ ನದಿಗಳು ಹಾಗೂ ಜಲಾಶಯಗಳ ನೀರಿನ…