ಅಳಿಕೆ ಗ್ರಾಮ ಪಂಚಾಯತಿನ ಎರಡನೇ ಅವಧಿಗೆ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ಪದ್ಮನಾಭ ಪೂಜಾರಿ ಸಣ್ಣಗುತ್ತು ಮತ್ತು ಉಪಾಧ್ಯಕ್ಷರಾಗಿ ಶ್ರಿಮತಿ ಸರೋಜಿನಿ ಕೇಕಣಾಜೆ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಶ್ರೀ ಡಾ.ರಾಜಾರಾಮ್, ಕೆ.ಪಿ.ಸಿ.ಸಿ ಸದಸ್ಯರಾದ M.S. ಮಹಮ್ಮದ್, DCC ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಆಳ್ವ, ರಮಾನಾಥ ವಿಟ್ಲ, ಮೋಹನ ಗುರ್ಜಿನಡ್ಕ, ವಿ.ಕೆ.ಯಂ. ಅಶ್ರಫ್, ಶ್ರೀನಿವಾಸ ಶೆಟ್ಟಿ ವಿಟ್ಲ, ರವಿ ಆಲಂಗಾರು, ಸುಶಾಂತ್ ಶೆಟ್ಟಿ, ಲಕ್ಷ್ಮಣ ಪೂಜಾರಿ, ಜನಾರ್ಧನ ಪೂಜಾರಿ, ಪ್ರವೀಣ್ ಪೂಜಾರಿ, ಸುಧಾಕರ ಮಡಿಯಾಲ ಹಾಗೂ ಪಂಚಾಯತ್ ಸದಸ್ಯರಾದ, ಸರಸ್ವತಿ ಕೆ, ಜಗದೀಶ ಶೆಟ್ಟಿ ಮುಳಿಯ, ಸೀತಾರಾಮ ಶೆಟ್ಟಿ ಮುಳಿಯ, ಸದಾಶಿವ ಶೆಟ್ಟಿ ಮಡಿಯಾಲ, ರವೀಶ ಕೆ, ಕಾನ ಈಶ್ವರ ಭಟ್, ಸೆಲ್ವಿನಾ ಡಿಸೋಜ, ಬಬಿತಾ ಜೆಡ್ಡು, ಶಾಂಭವಿ ಸುಧಾಕರ, ಗಿರಿಜ ಎನ್, ಭಾಗೀರಥಿ, ಶಶಿಕಲಾ, ಸುಕುಮಾರ, ಮುಂತಾದವರು ಉಪಸ್ಥಿತರಿದ್ದು ಅಭಿನಂದಿಸಿದರು. ಚುನಾವಣಾಧಿಕಾರಿಯಾಗಿ, ಶ್ರೀಮತಿ ಉಷಾ (CDPO ವಿಟ್ಲ) ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಅಳಿಕೆ ಗ್ರಾ.ಪಂ. P.D.O. ಜಿನ್ನಪ್ಪ ಗೌಡ ಸಹಕರಿಸಿದರು.




