ಜನ ಮನದ ನಾಡಿ ಮಿಡಿತ

Advertisement

“ಕೊರಮ್ಮ”, ತುಳು ಸಿನೆಮಾ ಸುರತ್ಕಲ್ ನಲ್ಲಿರುವ ಸಿನಿಗ್ಯಾಲಕ್ಸಿ ಚಿತ್ರಮಂದಿರದಲ್ಲಿ ಭರ್ಜರಿ ಬಿಡುಗಡೆ

ಸುರತ್ಕಲ್ ನಲ್ಲಿ “ಕೊರಮ್ಮ” ಚಿತ್ರ ಭರ್ಜರಿ ಬಿಡುಗಡೆ. “ಕೊರಮ್ಮ”, ಇಂದಿನ ಯುವ ಜನತೆಯನ್ನು ಬೆರಗುಗೊಳಿಸುವಂತೆ ಮಾಡಿದೆ. ಈ ಸಿನಿಮಾವನ್ನು ತುಳು ನಾಡಿನ ಎಲ್ಲರೂ ನೋಡಿ ಪ್ರೋತ್ಸಾಹಿಸ ಬೇಕು – ಶಿವಧ್ವಜ್ ಶೆಟ್ಟಿ

ಸುರತ್ಕಲ್ : ತುಳುನಾಡ ಸಂಸ್ಕೃತಿ, ಆಚಾರ- ವಿಚಾರ, ನಡೆ-ನುಡಿ, ಜೀವನ ಪದ್ಧತಿ, ಇವೆಲ್ಲವುಗಳೊಂದಿಗೆ ಮನೋರಂಜನೆಯನ್ನು ಬೆರಸಿಕೊಂಡು ನೋಡುಗರಿಗೆ ಕುತೂಹಲ ಹುಟ್ಟಿಸಿ ಸುಂದರವಾಗಿ ಮೂಡಿಬಂದಿರುವ ತುಳು ಸಿನೆಮಾ “ಕೊರಮ್ಮ”, ಇಂದಿನ ಯುವ ಜನತೆಯನ್ನು ಬೆರಗುಗೊಳಿಸುವಂತೆ ಮಾಡಿದೆ. ಈ ಸಿನಿಮಾವನ್ನು ತುಳು ನಾಡಿನ ಎಲ್ಲರೂ ನೋಡಿ ಪ್ರೋತ್ಸಾಹಿಸ ಬೇಕು ಎಂದು ನಿರ್ದೇಶಕ ಶಿವಧ್ವಜ್ ಶೆಟ್ಟಿ ತಿಳಿಸಿದರು.
ಸುರತ್ಕಲ್ ನಲ್ಲಿರುವ ಸಿನಿಗ್ಯಾಲಕ್ಸಿ ಚಿತ್ರಮಂದಿರದಲ್ಲಿ ಕೊರಮ್ಮ ತುಳು ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಅವರು ಮಾತನಾಡಿದರು.


ಸಮಾರಂಭದಲ್ಲಿ ನಿರ್ಮಾಪಕ ಅಡ್ಯಾರ್ ಮಾಧವ ನಾಯ್ಕ್, ಸಿನಿಗ್ಯಾಲಕ್ಸಿ ಸಂಸ್ಥೆಯ ನಿರ್ದೇಶಕ ಶಶಿಕುಮಾರ್, ಕೃಷ್ಣ ಅಡ್ಯಂತಾಯ, ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ, ವೆಂಕಟರಮಣ, ದಿನೇಶ್ ಪರಂಗಿಪೇಟೆ, ಮಧು ಸುರತ್ಕಲ್, ನಟ ಮೋಹನ್ ಶೇಣಿ, ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಉಪಾಧ್ಯೆಕ್ಷೆ ಸರೋಜ ಟಿ ಶೆಟ್ಟಿ, ಸರಾಯು ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಸಿನಿಗ್ಯಾಲಕ್ಸಿಯ ದೀಪಕ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು, ಸುರತ್ಕಲ್, ಪುತ್ತೂರು, ಪಡುಬಿದ್ರೆ, ಮುಂತಾದ ಕಡೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ ಎಂದು ನಿರ್ಮಾಪಕ ಅಡ್ಯಾರ್ ಮಾಧವ ನಾಯ್ಕ್ ತಿಳಿಸಿದರು.


ಸಫೈರ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ಅಡ್ಯಾರ್ ಮಾಧವ ನಾಯ್ಕ್ ಅರ್ಪಿಸಿರುವ ಈ ಚಿತ್ರದ ಹಾಡಿನ ದೃಶ್ಯದಲ್ಲಿ ತುಳುನಾಡಿನ ಪೂರ್ವಜರ ಬದುಕು ಮಾರ್ಮಿಕವಾಗಿ ಪ್ರತಿಬಿಂಬಿತವಾಗಿದೆ. ತುಳುವರ ಹಿರಿಯರ ಕಾಲದ ಪರಿಕರಗಳನ್ನು ಸಮರ್ಥವಾಗಿ ಬಳಸಿಕೊಂಡು ಮಾಡಿರುವ ಈ ಸಿನೆಮಾದ ಕಥೆ-ಚಿತ್ರಕಥೆ-ನಿರ್ದೇಶನ ರಾಷ್ಟ್ರ ಪ್ರಶಸ್ತಿ ಚಿತ್ರ ನಿರ್ದೇಶಕ ಶಿವಧ್ವಜ್ ಶೆಟ್ಟಿ. ನಿರ್ಮಾಪಕರು ಅಡ್ಯಾರ್ ಮಾಧವ ನಾಯ್ಕ್, ಈಶ್ಚರಿದಾಸ್ ಶೆಟ್ಟಿ ಮತ್ತು ರಾಜೇಶ್ವರ ರೈ, ಸಂಗೀತ ಶಿನೋಯ್ ಎ. ಜೋಸೆಫ್, ಛಾಯಾಗ್ರಹಣ ಸುರೇಶ್‌ ಬೈರಸಂದ್ರ, ಸಂಕಲನ ಗಣೇಶ್ ನೀರ್ಚಾಲ್, ಸಂಭಾಷಣೆ ಶ್ರೀನಿಧಿ ಭಟ್, ಅನುವಾದ ಮತ್ತು ಸಾಹಿತ್ಯ ಕೆ. ಮಹೇಂದ್ರನಾಥ್ ಸಾಲೆತ್ತೂರು, ಕಲೆ ಸಂತೋಷ ಪೂಜಾರಿ ವೇಣೂರು, ಸಹ ನಿರ್ದೇಶನ ಹರ್ಷೀವ ಭಗೀರ, ಪ್ರಸಾಧನ ಕುಮಾರ್ ನೋಣವಿನಕೆರೆ, ನಿರ್ಮಾಣ-ನಿರ್ವಹಣೆ ವೀರೇಶ್‌ ಎಸ್. ಪಿ. ಕಾರ್ಕಳದ ಬೈಲೂರಿನ ಸುಂದರ ತಾಣದಲ್ಲಿ ಒಂದೇ ಹಂತದಲ್ಲಿ ಚಿತ್ರೀಕಣವಾಗಿರುವ “ಕೊರಮ್ಮ” ಚಿತ್ರದ ತಾರಾಗಣದಲ್ಲಿ – ಗುರುಹೆಗ್ಡೆ, ರೂಪ ಶ್ರೀ ವರ್ಕಾಡಿ, ಮೋಹನ್‌ ಶೇಣಿ, ಬಿಂದುರಕ್ಷಿದಿ, ಜಿನಪ್ರಸಾದ್‌, ದಿವ್ಯಶ್ರೀ, ನಾಯಕ್, ಲಕ್ಷ್ಮಣ್ ಕುಮಾರ್ ಮಲ್ಲೂರು, ನಮಿತಾ ಕೂಳೂರು, ಸುಮನ ಮಂಗಳೂರು, ಹರೀಶ್‌ ಜೋಡು ರಸ್ತೆ, ಮತ್ತಿರರು ನಟಿಸಿರುತ್ತಾರೆ. ತುಳು ಚಿತ್ರರಂಗಕ್ಕೆ ಬದಲಾವಣೆ ಕೊಡಬಲ್ಲ ಮೌಲ್ಯಯುತವಾದ ಕಥಾವಸ್ತುವನ್ನು “ಕೊರಮ್ಮ ಚಲನಚಿತ್ರ ಹೊಂದಿದೆ.
ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ‌ ನಿರ್ವಹಿಸಿದರು.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!