ದಕ್ಷಿಣ ಕನ್ನಡ : ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆಯ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಕೃಷಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಹರೇಕಳ ಗ್ರಾಮದ ಕುತ್ತಿಮುಗೇರು ಪ್ರದೇಶದ ಗದ್ದೆಗೆ ಕರೆದುಕೊಂಡು ಹೋಗಲಾಯಿತು.

ಮಕ್ಕಳಿಗೆ ಬೇಸಾಯವನ್ನು ಯಾವ ರೀತಿ ಮಾಡುವರು ಎಂಬುದರ ಬಗ್ಗೆ ನಮ್ಮ ಶಾಲೆಯ ಅಧ್ಯಕ್ಷರಾದ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಮಾಹಿತಿ ಯನ್ನು ಮಕ್ಕಳಿಗೆ ನೀಡಿದರು. ಹಲವಾರು ಮಕ್ಕಳು ಗದ್ದೆಗೆ ಇಳಿದು ನಾಟಿ ಮಾಡಿ ಕೃಷಿಯ ಬಗೆಗಿನ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡರು.











