ಪುತ್ತೂರು ಸರಕಾರಿ ಆಸ್ಪತ್ರೆಗೆ ಸಕಲ ಸೌಕರ್ಯದೊಂದಿಗೆ ಮೇಲ್ದರ್ಜೆಗೇರಿಸ್ತೇವೆ. ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ನನ್ನದೂ ಸಹಮತ ಇದೆ. ಅದಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ – ದಿನೇಶ್ ಗುಂಡೂರಾವ್

ಪುತ್ತೂರು ಶಾಸಕರು ಅಶೋಕ್ ಕುಮಾರ್ ರೈ ಯವರ ಕಛೇರಿಯಲ್ಲಿ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ದಿನೇಶ್ ಗುಂಡೂರಾವ್ ಸಾರ್ವಜನಿಕ ಅವಹಾಲು ಸ್ವೀಕರಿಸಿದರು. ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸ್ತೇವೆ. ಆಸ್ಪತ್ರೆಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ನಮ್ಮ ಇಲಾಖೆಯಿಂದ ಮಾಡಿಸ್ತೇವೆ. ಪುತ್ತೂರಿಗೆ ಮೆಡಿಕಲ್ ಕಾಲೇಜು ಆಗಬೇಕು ಎಂಬ ಒತ್ತಾಯ ನಮ್ಮ ಶಾಸಕರದ್ದಿದೆ. ಅದಕ್ಕೆ ನನ್ನದೂ ಸಹಮತ ಇದೆ. ಅದಕ್ಕಾಗಿ ಒಂದು ದೊಡ್ಡ ಹೋರಾಟವೇ ಆಗಬೇಕಿದೆ. ನಾವೆಲ್ಲ ಒಟ್ಟಾಗಿ ಮಾಡೋಣ. ಕಂದಾಯ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸೋಣ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.






