ಜಾಗತಿಕ ಬಂಟರ ಸಂಘಗಗಳ ಒಕ್ಕೂಟ ಮಂಗಳೂರು ವತಿಯಿಂದ ಅಕ್ಟೋಬರ್ 28, 29 ರಂದು ಉಡುಪಿಯ ಅಜ್ಜರಕಾಡುವಿನಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮಿಲನ, ಕ್ರೀಡಾಕೂಟ ಹಾಗೂ ವಿಶ್ವ ಸಾಂಸ್ಕೃತಿಕ ಸಂಭ್ರಮದ ಪೂರ್ವಭಾವಿ ಸಭೆಯು ಉಡುಪಿಯ ಅಂಬಾಗಿಲು ಅಮೃತ ಗಾರ್ಡನ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಹೇರಂಭ ಇಂಡಸ್ಟ್ರಿಸ್ ಲಿಮಿಟೆಡ್, ಕೆಮಿನೋ ಫಾರ್ಮಾ ಲಿಮಿಟೆಡ್ ಮುಂಬೈ ಇದರ ಚೆರ್ಮೆನ್ ಕನ್ಯಾನ ಸದಾಶಿವ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ತಂದನಂತರ ಮಾತನಾಡಿದ ಕನ್ಯಾನ ಸದಾಶಿವ ಶೆಟ್ಟಿ ಅವರು ಐಕಳ ಹರೀಶ್ ಶೆಟ್ಟಿ ಹಾಗೂ ಕರ್ನಿರೆ ವಿಶ್ವನಾಥ್ ಶೆಟ್ಟಿ ಯವರ ನೇತೃತ್ವದಲ್ಲಿ ಬಂಟರ ಸಮಾಜಕ್ಕೆ ಇನ್ನಷ್ಟು ಬಲ ಬಂದಿದೆ. ಅವರ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ. ಈ ವರ್ಷದ ವಿಶ್ವ ಬಂಟರ ಸಮ್ಮೇಳನವನ್ನು ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಬಂಟ ಸಂಘಗಳನ್ನು ಒಟ್ಟುಗೂಡಿಸುವ ಒಂದೊಳ್ಳೆ ಕಾರ್ಯಕ್ರಮ. ಕಾಸರಗೋಡು, ಮಂಗಳೂರು ಹಾಗೂ ಉಡುಪಿಯ ಎಲ್ಲ ಬಂಟರನ್ನು ಒಟ್ಟುಗೂಡಿಸಿ, ಅನೇಕ ಹಿಂದುಳಿದ ಜನರಿಗೆ ಆರ್ಥಿಕ ಸಹಾಯ ಮಾಡುತ್ತಿರುವ ಮಹಾನ್ ಕಾರ್ಯ ನಮ್ಮ ಐಕಳ ಹರೀಶ್ ಶೆಟ್ಟಿ ಅವರು ಮಾಡುತ್ತಾ ಇದ್ದಾರೆ. ಇನ್ನಷ್ಟು ಒಳ್ಳೆಯ ಕಾರ್ಯಗಳು ನಮ್ಮ ಬಂಟರ ಸಂಘಗಳಿಂದ ನಡೆಯಲಿ. ಧಣಿಗಳನ್ನು ದಾನಿಯಾಗಿಸುವ ಒಳ್ಳೆಯ ಕಾರ್ಯ ಐಕಳ ಹರೀಶ್ ಶೆಟ್ಟಿ ಮಾಡುತ್ತಾ ಇದ್ದಾರೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುವಂತಹ ಶಕ್ತಿ ಆ ದೇವರು ಕರುಣಿಸಲಿ. ಉಡುಪಿಯಲ್ಲಿ ನಡೆಯುವ ವಿಶ್ವ ಬಂಟರ ಸಮ್ಮಿಲನ ಅಭೂತಪೂರ್ವ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಕ್ರೀಡಾ ಸಂಗಮದ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಲಾರ್ ಮಾತನಾಡಿ, ನಾನು ಸತತ 25 ವರ್ಷದಿಂದ ಐಕಳ ಹರೀಶ್ ಶೆಟ್ಟಿ ಅವರೊಂದಿಗೆ ಇದ್ದೇನೆ. ಅವರಂತ ನಾಯಕರಿದ್ದರೆ ಯಾವುದೇ ಕಾರ್ಯಕ್ರಮವಾದರೂ ಯಶಸ್ವಿಯಾಗುವುದು ಖಂಡಿತ. ಕ್ರೀಡಾ ಆಸಕ್ತಿ ಹೊಂದಿದ್ದ ನನ್ನನ್ನು ಮುಂಬೈ ಬಂಟ ಸಂಘದ ಕ್ರೀಡಾ ಸಮೀತಿಯ ಚೇರ್ಮನ್ ಆಗಿ ನೇಮಕ ಮಾಡಿದ್ದಾರೆ. ಈ ಭಾರೀ ಉಡುಪಿಯಲ್ಲಿ ನಡೆಯುವ ಜಾಗತಿಕ ಬಂಟರ ಸಂಘದಿಂದ ನಡೆಯುವ ವಿಶ್ವ ಕ್ರೀಡಾಕೂಟದ ಜವಾಬ್ದಾರಿ ನನಗೆ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಕುಂದು ಕೊರತೆ ಬಾರದಂತೆ ನೋಡಿಕೊಳ್ಳುತ್ತೇನೆ. ಎಲ್ಲರ ಸಹಕಾರವಿದ್ದರೆ ಹದಿನೈದರಿಂದ ಇಪ್ಪತ್ತು ಸಾವಿರ ಜನ ಸೇರುವ ಸಾಧ್ಯತೆ ಇದೆ ಹಾಗಾಗಿ ಎಲ್ಲರೂ ಸಹಕರಿಸಿ ಈ ಕಾರ್ಯಕ್ರಮವನ್ನು ಯಶಸ್ಸುಗೊಳಿಸಿ ಎಂದು ವಿನಂತಿಸಿಕೊಂಡರು

ಅಕ್ಟೋಬರ್ 29 ರಂದು ನಡೆಯುವ ಸಾಂಸ್ಕೃತಿಕ ವೈಭವದ ಸಂಚಾಲಕರಾದ ಚಂದ್ರಹಾಸ ಶೆಟ್ಟಿ ಮಾತನಾಡಿ, ಐಕಳ ಹರೀಶ್ ಶೆಟ್ಟಿಯವರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಅದೆಷ್ಟೋ ಜನರ ಜೀವನಕ್ಕೆ ದಾರಿ ದೀಪವಾಗಿದ್ದಾರೆ. ಉಡುಪಿಯಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮಿಲನದ ಸಾಂಸ್ಕೃತಿಕ ಕಾರ್ಯಕ್ರಮ ಸಮಾಜದ ಹಿರಿಯರಿಂದ ಕಿರಿಯರವರೆಗೆ ಎಲ್ಲರನ್ನೂ ಒಟ್ಟುಗೂಡಿಸುವ ಒಂದು ಅದ್ಭುತ ಪ್ರಯತ್ನ. ನಮ್ಮ ಅಂದಾಜಿನ ಪ್ರಕಾರ ಈ ಕಾರ್ಯಕ್ರದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ವಿದೇಶದಿಂದ ಸುಮಾರು 40ರಿಂದ 50 ತಂಡಗಳು ಭಾಗವಹಿಸುವ ಸಾಧ್ಯತೆ ಇದೆ. ಎಲ್ಲಾ ಸಂಘಗಳಿಂದ ಒಂದು ತಂಡವನ್ನು ಕಳುಹಿಸಿ ನಮ್ಮ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಕೇಳಿಕೊಂಡರು.

ಕ್ರೀಡಾಕೂಟದ ಪಥಸಂಚಲನ ಬಹಳಷ್ಟು ಆಕರ್ಷಣೆ ಯನ್ನು ತೋರಿಸ್ತದೆ. ಬೇರೆ ಬೇರೆ ತಂಡಗಳು ವಿವಿಧ ವೇಷಾಭೂಷಣಗಳೊಂದಿಗೆ ಪಥಸಂಚಲನದಲ್ಲಿ ಪಾಲ್ಗೊಂಡಾಗ ನಮ್ಮ ಕ್ರೀಡೋತ್ಸವವು ಯಶಸ್ವಿಯಾಗಿ ಹೊರಹೊಮ್ಮುತ್ತದೆ. ಎರಡು ದಿನಡಾ ಬಂಟರ ಸಮ್ಮಿಲನ ಬಂಟರ ಸಂಭ್ರಮೋತ್ಸವದಂತಿರಬೇಕು. ನಮ್ಮ ನಮ್ಮಲ್ಲಿ ಬಿನ್ನಾಭಿಪ್ರಾಯಗಳು ಬರದಂತೆ ಇಡೀ ಬಂಟ ಸಮುದಾಯವನ್ನು ಒಟ್ಟು ಮಾಡುವಂತಹ ಕಾರ್ಯಕ್ರಮ ಇದಾಗಬೇಕು. ಐಕಳ ಹರೀಶ್ ಶೆಟ್ಟರ ಪ್ರಯತ್ನಕ್ಕೆ ನಾವೆಲ್ಲರೂ ಒಟ್ಟೂ ಸೇರಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಈ ಕಾರ್ಯಕ್ರಮ ಅಪೋಘ ಯಶಸ್ಸು ಕಾಣುತ್ತದೆ ಎಂದು ಡಾ. ರೋಶನ್ ಶೆಟ್ಟಿ ಹೇಳಿದರು.

ಈ ಕಾರ್ಯಕ್ರಮವು ಬಂಟರ ಸಂಘದಲ್ಲಿ ಹೊಸ ಮೈಲುಗಲ್ಲನ್ನು ಸೃಸ್ಟಿ ಮಾಡಲು ನಾವು ಒಮ್ಮತವಾಗಿ ಸಹಕರಿಸಬೇಕು. ಉಡುಪಿಯಲ್ಲಿ ನಡೆಯುವ ವಿಶ್ವ ಬಂಟರ ಸಮ್ಮಿಲನದ ಪಬ್ಲಿಸಿಟೀ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಪ್ರತಿ ಒಂದು ಸಂಘಗಳು ಬ್ಯಾನರ್, ಫ್ಲೆಕ್ಸ್ ಗಳನ್ನು ಹಾಕಿ ಕ್ರೀಡಾಕೂಟ ಹಾಗೂ ಸಾಂಕೃತಿಕ ಕಾರ್ಯಕ್ರಮವನ್ನು ಎಲ್ಲರಿಗೆ ತಲುಪುವಂತೆ ಮಾಡಬೇಕು. ಬಂಟರ ಒಗ್ಗಟ್ಟಿನ ಶಕ್ತಿ ಪ್ರದರ್ಶನ ಈ ಕಾರ್ಯಕ್ರಮದ ಮೂಲಕ ತೋರಿಸೋಣ ಎಂದು ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಹೇಳಿದರು.

ತದನಂತರ ಮಾತಾಡಿದ ಒಕ್ಕೂಟದ ಪ್ಯಾಟರ್ನ್ ಮೆಂಬರ್, ಪಡುಬಿದ್ರಿ ಬಂಟರ ಸಂಘದ ಅದ್ಯಕ್ಷ ನವೀನ್ ಶೆಟ್ಟಿ, ಬೇರೆ ಬೇರೆ ಕಡೆಗಳಲ್ಲಿದ್ದ ಬಂಟರನ್ನ ಒಟ್ಟುಗೂಡಿಸಿ , ಅನೇಕ ದಾನಿಗಳನ್ನು ಒಟ್ಟುಗೂಡಿಸಿ ಬಂಟರ ಸಂಘದ ಮೂಲಕ ಅನೇಕ ಜನರಿಗೆ ಸಹಾಯ ನೀಡುವಲ್ಲಿ ಐಕಳ ಹರೀಶ್ ಶೆಟ್ಟಿ ಯಶಸ್ವಿಯಾಗಿದ್ದಾರೆ. ಅವರಂತೆಯೇ ಪ್ರತಿಬ್ಬರು ಸಮಾಜ ಸೇವೆಯತ್ತ ಮುಖ ಮಾಡಬೇಕು. ನಮ್ಮ ಮಕ್ಕಳನ್ನು . . ಮಾಡಿದ್ರೆ ಜನರ ಕಷ್ಟಗಳು ನಮ್ಮ ಬಳಿಗೆ ಬರುತ್ತವೆ ಇದರಿಂದ ಹೆಚ್ಚಿನ ಜನರಿಗೆ ನಮ್ಮ ಮೂಲಕ ಸಹಾಯ ಮಾಡಬಹುದು. ಹರೀಶ್ ಶೆಟ್ಟಿಯವರ ಈ ನಿಸ್ವಾರ್ಥ ಸಮಾಜ ಸೇವೆಗೆ ನಾವು ಸಹಕರಿಸಬೇಕು. ಅವರು ಮಾಡುವ ಪ್ರತಿ ಕಾರ್ಯಕ್ರಮಕ್ಕೆ ನಮ್ಮ ಒಮ್ಮತದ ಸಹಕಾರ ಕೊಡೋಣ ಎಂದು ಹೇಳಿದರು.

ಜಾಗತಿಕ ಬಂಟರ ಸಂಘಗಗಳ ಒಕ್ಕೂಟ ಮಂಗಳೂರು ವತಿಯಿಂದ ಅಕ್ಟೋಬರ್ 28, 29 ರಂದು ಉಡುಪಿಯ ಅಜ್ಜರಕಾಡುವಿನಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮಿಲನ, ಕ್ರೀಡಾಕೂಟ ಹಾಗೂ ವಿಶ್ವ ಸಾಂಸ್ಕೃತಿಕ ಸಂಭ್ರಮದ ಎರಡನೇ ಪೂರ್ವಭಾವಿ ಸಭೆ ಇಂದು ನಡೆಯಿತು. ಈ ವರ್ಷದ ಉಡುಪಿಯ ಬಂಟರ ಸಮ್ಮಿಳದಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ಸಾವಿರ ಜನ ಸೇರುವ ಸಾಧ್ಯತೆ ಇದೆ ಎನ್ನುವುದು ಎಲ್ಲರ ಅಭಿಪ್ರಾಯ. ಸುಮಾರು 26 ಬಂಟರ ಸಂಘದ ಅಧ್ಯಕ್ಷರು ಈ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದಾರೆ. ನಾವು ಬಂಟರೆಲ್ಲ ಒಂದಾಗಿ .ಏನಾದ್ರೂ ಒಳ್ಳೆಯ ಸಾಧನೆ ಮಾಡ್ಬೇಕು ಎಂದು ಐಕಳ ಹರೀಶ್ ಶೆಟ್ಟಿ ಈ ಪೂರ್ವಸಭೆಯನ್ನು ಮಾಡಿದ್ದಾರೆ. ಅಕ್ಟೋಬರ್ 28 29 ರಂದು ನಡೆಯುವ ವಿಶ್ವ ಬಂಟರ ಸಮ್ಮೇಳನ ಎಲ್ಲರ ಸಹಕಾರದೊಂದಿಗೆ ಅತ್ಯುತ್ತಮವಾಗಿ ಮೂಡಿಬರಲಿ ಎಂದು ಹೇಳುವುದರೊಂದಿಗೆ ನೆರೆದಿರುವ ಎಲ್ಲರಿಗೂ ಇಂದ್ರಾಳಿ ಜಯಕರ್ ಶೆಟ್ಟಿ ಅವರು ವಂದನೆ ಸಲ್ಲಿಸಿದರು. ಸಾಯಿನಾಥ್ ಶೆಟ್ಟಿ ಯವರು ಕಾರ್ಯಕ್ರಮವನ್ನ ನಿರೂಪಿಸಿದರು.





