ಹುಲ್ಲು ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಬಾಗಲಕೋಟ ಮೂಲದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ನಡೆದಿದೆ.
ಮನೆಯ ಅಂಗಳದ ಎದುರು ಹಸಿರು ಹುಲ್ಲು ತೆಗೆಯುತಿದ್ದ ವೇಳೆ ವಿದ್ಯುತ್ ಸ್ಪರ್ಶವಾಗಿ ವ್ಯಕ್ತಿ ಸಾವಿಡಾಗಿದ್ದಾನೆ. ಬಾಗಲಕೋಟ ನಿವಾಸಿ ಯಮನಪ್ಪ (38) ಮೃತಪಟ್ಟ ವ್ಯಕ್ತಿ. ಗುಡ್ಡೆಯಂಗಡಿ ನಿವಾಸಿ ಸೈಪುದ್ದೀನ್ ಎಂಬಾತನ ಮನೆಯ ಅಂಗಳದಲ್ಲಿ ಹುಲ್ಲನ್ನು ಮೆಷಿನ್ ಮೂಲಕ ಕತ್ತರಿಸುವ ವೇಳೆ ಈ ಘಟನೆ ನಡೆದಿದೆ.

ಮನೆಯ ಪಕ್ಕದಲ್ಲಿ ಕೊಳವೆಬಾವಿಯಿದ್ದು, ಇದರೊಳಗಿರುವ ಪಂಪ್ ಗೆ ನೀಡಲಾದ ವಿದ್ಯುತ್ ಸಂಪರ್ಕದ ತಂತಿಯಿದ್ದದ್ದನ್ನು ನೋಡದೆ ತುಂಡರಿಸಿದ್ದಾನೆ. ಈ ಕಾರಣದಿಂದ ವಿದ್ಯುತ್ ಹರಿದು ಈತ ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ಇಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಎಸ್.ಐ.ರಾಮಕೃಷ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.



