ದಕ್ಷಿಣ ಕನ್ನಡ: ಇತ್ತೀಚೆಗೆ ವಿದ್ಯಾಭಾರತಿ ಸಹಯೋಗದಲ್ಲಿ ಪುತ್ತೂರು ಬೆಟ್ಟಂಪಾಡಿಯಲಿ ನಡೆದ 19 ವರ್ಷದ ಒಳಗಿನ ಬಾಲಕರ ಜಿಲ್ಲಾ ಮಟ್ಟದ ವಾಲೀಬಾಲ್ ಪಂದ್ಯಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ, ವಚನ್ ಆರ್. ಎಸ್. ಗೌಡ ಹಾಗೂ ಷಷ್ಠಿಶ್ ಪಿ. ಶೆಟ್ಟಿ ಗೌರಿಕೋಡಿ ಬೀದರ್ ನಲ್ಲಿ ನಡೆಯಲಿರುವ ರಾಜ್ಯಮಟ್ಟದ ವಾಲೀಬಾಲ್ ಪಂದ್ಯಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು, ಮಂಗಳೂರಿನ ಶಾರದಾ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ.





