ಕರಾವಳಿ

ಭಾರತದ ನಾಳೆಗಳು ಇಂದಿನ ಯುವಜನತೆಯ ಮೇಲೆ ಅವಲಂಬಿತ: ಪ್ರೊ. ಸತ್ಯಂ ಸುವಾಸ್

ಮೂಡುಬಿದಿರೆ: ಸಣ್ಣ ಆವಿಷ್ಕಾರಗಳು ದೊಡ್ಡ ಬದಲಾವಣೆ ತರಲು ಸಾಧ್ಯ. ಹೊಸ ಆವಿಷ್ಕಾರಗಳನ್ನು ಗುರುತಿಸಿ ವಿದ್ರ‍್ಥಿಗಳಿಗೆ ಪ್ರೋತ್ಸಾಹಿಸುವುದರಿಂದ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆಯಾಗಬಲ್ಲದು ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮೆಟೀರಿಯಲ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಸತ್ಯಂ ಸುವಾಸ್ ಹೇಳಿದರು. ಮಿಜಾರಿನ ಆಳ್ವಾಸ್ ಎಂಜಿನಿಯರಿಆಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ರ‍್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದ 46ನೇ ರಾಜ್ಯ ಮಟ್ಟದ ವಿದ್ರ‍್ಥಿ ಪ್ರಾಜೆಕ್ಟ್ಗಳ ವಿಚಾರ ಸಂಕಿರಣ ಮತ್ತು ಪ್ರ‍್ಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ತಾಂತ್ರಿಕ ಜ್ಞಾನ ಹೊಂದಿರುವ ಯುವಜನತೆ ದೇಶದ ಬೆಳವಣಿಗೆಗೆ ಉತ್ತಮ ಕೊಡುಗೆ. ವಿದ್ರ‍್ಥಿಗಳ ಆಸಕ್ತಿ ಹೊಸ ಆವಿಷ್ಕಾರಗಳನ್ನು ಹುಟ್ಟು ಹಾಕಿದೆ. ಪ್ರತಿಯೊಂದು ಹೊಸ ಆವಿಷ್ಕಾರಗಳನ್ನು ಪ್ರೋತ್ಸಾಹಿಸಿದಾಗ ದೇಶ ಅಭಿವೃದ್ಧಿ ಹೊಂದುತ್ತದೆ.

ಭಾರತದ ನಾಳೆಗಳು ಇಂದಿನ ಯುವಜನತೆಯ ಮೇಲೆ ಅವಲಂಬಿತವಾಗಿದೆ ಎಂದರು. ರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಎಸ್‌ಸಿಎಸ್‌ಟಿ ರ‍್ಯರ‍್ಶಿ ಪ್ರೊ. ಅಶೋಕ್ ಎಂ. ರಾಯಚೂರು ಮಾತನಾಡಿ ವಿದ್ರ‍್ಥಿಗಳ ಯೋಜನೆಗಳು ಸ್ಥಳೀಯ ಸಮಸ್ಯೆಗಳನ್ನು ಸರಿದೂಗಿಸಲು ಸಹಕಾರಿಯಾಗಿರುವುದು ವಿಶೇಷ. ಹೀಗಾಗಿ ದೇಶದ ಅಭಿವೃದ್ಧಿಗೆ ಇವು ಪೂರಕವಾಗಲಿವೆ ಎಂದರು. ಕೆಎಸ್‌ಸಿಎಸ್‌ಟಿ ರ‍್ಯರ‍್ಶಿ ಪ್ರೊ. ಅಶೋಕ್ ಎಂ. ಹಾಗೂ ರ‍್ಯರ‍್ವಾಹಕ ರ‍್ಯರ‍್ಶಿ ಡಾ. ಯು ಟಿ ವಿಜಯ್ ಅವರನ್ನು ಆಳ್ವಾಸ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ರ‍್ಯಕ್ರಮದ ಕೊನೆಯಲ್ಲಿ ವಿವಿಧ ವಿಭಾಗಗಳ ವಿದ್ರ‍್ಥಿ ಪ್ರಾಜೆಕ್ಟ್ಗಳಲ್ಲಿ 28 ಉತ್ತಮ ಪ್ರ‍್ಶನಗೊಂಡ ಯೋಜನೆಗಳಿಗೆ ಹಾಗೂ 29 ಉತ್ತಮ ಸೆಮಿನಾರ್‌ಗಳಿಗೆ ಪ್ರಶಸ್ತಿ, ಪ್ರಮಾಣಪತ್ರ ಹಾಗೂ ನಗದು ಪುರಸ್ಕಾರ ನೀಡಲಾಯಿತು. ಬೆಂಗಳೂರಿನ ಆರ್‌ವಿ ಇಂಜಿನಿಯರಿಂಗ್ ಕಾಲೇಜು ಅತ್ಯುತ್ತಮ ಸಾಧನೆಗಾಗಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಕೆಎಸ್‌ಸಿಎಸ್‌ಟಿ ರ‍್ಯರ‍್ವಾಹಕ ರ‍್ಯರ‍್ಶಿ ಡಾ. ಯು ಟಿ ವಿಜಯ್ ಸ್ವಾಗತಿಸಿದರು. ಆಳ್ವಾಸ್ ಇಂಜಿನಿಯರಿಆಗ್ ಕಾಲೇಜಿನ ಡಾ. ಪೀಟರ್ ರ‍್ನಾಂಡಿಸ್ ವಂದಿಸಿದರು. ಕೆಎಸ್‌ಸಿಎಸ್‌ಟಿ ಸೀನಿಯರ್ ಪ್ರಾಜೆಕ್ಟ್ ಇಂಜಿನಿಯರ್ ಕೆ. ಎನ್ ವೆಂಕಟೇಶ್ ಪ್ರಶಸ್ತಿ ವಿಜೇತರನ್ನು ಘೋಷಿಸಿದರು. ಆಳ್ವಾಸ್ ಪದವಿ ರ‍್ವ ಕಾಲೇಜಿನ ಉಪನ್ಯಾಸಕ ರಾಜೇಶ್ ಡಿಸೋಜ ನಿರೂಪಿಸಿದರು.

2 ದಿನ ನಡೆದ ವಿದ್ರ‍್ಥಿ ಯೋಜನೆಗಳ ಪ್ರ‍್ಶನದಲ್ಲಿ ಹಲವು ಯೋಜನೆಗಳು ವಿಶೇಷವಾಗಿ ಗಮನ ಸೆಳೆಯಿತು.. ವಿದ್ರ‍್ಥಿಗಳು ಆಸಕ್ತರಿಗೆ ಬಹಳ ಅಚ್ಚುಕಟ್ಟಾಗಿ ತಮ್ಮ ಯೋಜನೆಗಳನ್ನು ವಿವರಿಸಿದರು. ಅಣಬೆ ಕೃಷಿಗೂ ಬಂತು ಇಲೆಕ್ಟ್ರಾನಿಕ್ಸ್ ತಂತ್ರಜ್ಞಾನ.. !
ಇತ್ತೀಚಿನ ದಿನಗಳಲ್ಲಿ ಅಣಬೆ ಕೃಷಿಗೆ ಹೆಚ್ಚಿನ ಬೇಡಿಕೆಯಿದೆ. ಅಣಬೆ ಕೃಷಿಗೆ ಸೂಕ್ತವಾದ ವಾತಾವರಣ ಹಾಗೂ ಹವಾಮಾನದ
ಅಗತ್ಯವಿರುತ್ತದೆ. ಕರಾವಳಿ ಭಾಗಗಳಲ್ಲಿ ಅಣಬೆ ಬೆಳೆಯಲು ಬೇಕಾದ ವಾತಾವರಣ ಸ್ವಾಭಾವಿಕವಾಗಿ ಇಲ್ಲಿನ ಬಿಸಿಲು, ಮಳೆ ಹಾಗೂ ತೇವಾಂಶ ಭರಿತ ಹವಾಗುಣದಿಂದ ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ತಂತ್ರಜ್ಞಾನ ಬಳಸಿ ಆಳ್ವಾಸ್
ಇಂಜಿನಿಯರಿಆಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ವಿಭಾಗದ ಪ್ರಾಧ್ಯಾಪಕ ಸುಧಾಕರ್ ಎಚ್. ಎಮ್ ರ‍್ಗರ‍್ಶನದಲ್ಲಿ ವಿದ್ರ‍್ಥಿಗಳಾದ ಶಶಾಂಕ್ ಎಸ್. ಕಶ್ಯಪ್, ಪ್ರತೀಕ್ ಕುಮಾರ್, ಸಾತ್ವಿ ಹಾಗೂ ಸುಮಾ ಹೊಸ ಮಾದರಿಯೊಂದನ್ನು ರಚಿಸಿದ್ದಾರೆ. ಈ ಮೂಲಕ ಅಣಬೆ ಕೃಷಿಗೂ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಈ ಯೋಜನೆಯಲ್ಲಿ ಡಿಎಚ್‌ಟಿ 11 ಸೆನ್ಸಾರ್ ಬಳಸಿ ಉಷ್ಣತೆ ಹಾಗೂ ತೇವಾಂಶವನ್ನು ನಿಯಂತ್ರಿಸಹುದು. ಜಿಎಸ್‌ಎಮ್ ಮಾಡ್ಯೂಲ್ ಅಳವಡಿಸುವ ಮೂಲಕ, ನಾವಿರುವ ಸ್ಥಳದಿಂದಲೇ ಬ್ಲಿಂಕ್ ಆ್ಯಪ್ ಮೂಲಕ ಅಣಬೆಯ ಬೆಳವಣಿಗೆಗೆ ಬೇಕಾದ ವಾತಾವರಣವನ್ನು ಅಗತ್ಯತೆಯನ್ನು ಪರಿಶೀಲಿಸಬಹುದು. ಒಟ್ಟಿನಲ್ಲಿ ವಿದ್ರ‍್ಥಿಗಳ ಈ ಯೋಜನೆಯ ಮುಖಾಂತರ ಯಾವುದೇ ಸ್ಥಳದಲ್ಲಿ ಅಣಬೆ ಕೃಷಿಯನ್ನು ನಿರಾಯಾಸವಾಗಿ ಮಾಡಬಹುದು.

ಕೃಷಿ ನೀರಾವರಿಗೂ ವಿದ್ರ‍್ಥಿಗಳ ಸೊಲ್ಯೂಷನ್ ನದಿ ನೀರಾವರಿ ಯೋಜನೆಗಳನನು ಕೇಳಿಯೇ ಇರುತ್ತೇವೆ. ಇಲ್ಲೊಂದು ವಿದ್ರ‍್ಥಿಗಳ ತಂಡ ರ‍್ನಾಟಕದ ನದಿಗಳಲ್ಲೊಂದಾದ ವಾರಾಹಿ ನದಿ ಮೂಲದ ರ‍್ಫೋಮೆಟ್ರಿಕ್ ಅನಾಲಿಸಿಸ್ ಮೂಲಕ ನದಿಯ ಪರಿಮಾಣತ್ಮಕ (ಕ್ವಾಂಟಿಟೇಟಿವ್) ಆಧ್ಯಯನ ನಡೆಸಿ, ಆ ನದಿಗೆ ಎಲ್ಲೆಲ್ಲಿ ಅಣೆಕಟ್ಟುಗಳನ್ನು ಕಟ್ಟಬಹುದು ಮತ್ತು ಸಣ್ಣ ನೀರಾವರಿ ಯೋಜನೆಗಳನ್ನು ಕೈಗೊಳ್ಳಬಹುದೆಂಬ ವೈಜ್ಞಾನಿಕ ವರದಿಯನ್ನು ಸಿದ್ಧಪಡಿಸಿದೆ. ಈ ಯೋಜನೆಯ ಭಾಗವಾಗಿ, ರಿವರ್ ರಿಫ್ಟಿಂಗ್ ತಂತ್ರಜ್ಞಾನದ ಮೂಲಕ ಸಂಡೂರು ಡ್ಯಾಮ್‌ನಿಂದ 5000 ಎಕರೆ ಕೃಷಿ ಭೂಮಿಗೆ ಬೇಸಿಗೆಯಲ್ಲೂ ನೀರು ಒದಗಿಸುವ ನಿಟ್ಟಿನಲ್ಲಿ, ಉಡುಪಿ ಜಿಲ್ಲಾ ಜಲ ಸರ‍್ಧನಾ ನಿಧಿಗೆ ಈಗಾಗಲೇ ಒಂದು ಪ್ರಸ್ತಾವನೆ ನೀಡಲಾಗಿದೆ. ಪ್ರಸ್ತಾವನೆಯು ಟೆಂಡರ್ ಹಂತದಲ್ಲಿದೆ ಎನ್ನುವುದು ವಿಶೇಷ. ಆಳ್ವಾಸ್ ಇಂಜಿನಿಯರಿಆಗ್ ಕಾಲೇಜಿನ ಡಾ. ಎಚ್. ಬಿ ಉಮೇಶ್ ಅವರ ಮಾರ್ಗದರ್ಶನದಲ್ಲಿ ಧೀರಜ್ ಸಿಂಧೆ, ಅಬ್ದುಲ್ ಮಜೀದ್, ಕೃತಿಕ್ ಹಾಗೂ ಮನೋಹರ್ ಎಂಬ ನಾಲ್ವರು ವಿದ್ರ‍್ಥಿಗಳ ತಂಡ ಈ ಯೋಜನೆಯಲ್ಲಿ ಸಕ್ರಿಯವಾಗಿದ್ದಾರೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…

18 hours ago

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…

18 hours ago

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…

19 hours ago

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…

19 hours ago

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…

19 hours ago

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…

2 days ago