ಉಜಿರೆಯ ಅಜಿತ್ ನಗರ ಕಲ್ಲೆಯ ಫೆಲಿಕ್ಸ್ ರೊಡ್ರಿಗಸ್ ಅವರ ಮನೆಯಲ್ಲಿ ಹಾಡು ಹಗಲೇ ಕಳ್ಳತನ ನಡೆದ ಘಟನೆ ನಡೆದಿದೆ. ಫೆಲಿಕ್ಸ್ ಅವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಪತ್ನಿ ಉಜಿರೆ ಅನುಗ್ರಹ ಶಾಲೆಯಲ್ಲಿ ಹೆಲ್ಪರ್ ಕೆಲಸಕ್ಕೆ ಹೋಗುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳು ಕಾಲೇಜಿಗೆ ಹೋಗುತ್ತಿದ್ದು ಯಾರು ಇಲ್ಲದ ಸಂದರ್ಭದಲ್ಲಿ ಘಟನೆ ನಡೆದಿದೆ. ಮಗಳು ಶಾಲೆಯಿಂದ ಮನೆಗೆ ಬಂದ ಸಂದರ್ಭ ಕಳ್ಳತನ ಬೆಳಕಿಗೆ ಬಂದಿದೆ. ಹಿಂದಿನ ಬಾಗಿಲು ನಿಂದ ಒಳಗೆ ಹೋಗಿ ಮುಂದಿನ ಬಾಗಿಲಿಗೆ ಚಿಲಕ ಹಾಕಲಾಗಿದ್ದು, ಕಪಾಟಿನಲ್ಲಿದ್ದ ಕರಿಮಣಿ ಸರ,4 ಬಳೆ, 8 ಜೋಡಿ ಕಿವಿಯೋಲೆ, 3ಪವನ್ ನೆಕ್ಲಸ್, 3ಚೈನ್, 4 ಉಂಗುರ, 1 ಬ್ರೆಸ್ಲಾಟ್, ನಗದು 10 ಸಾವಿರ, ಒಟ್ಟು 15 ಪಾವನ್ ಚಿನ್ನವನ್ನು ದರೋಡೆಕೋರರರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಎಸ್.ಐ ಧನರಾಜ್ ಆಗಮಿಸಿ ಪರಿಶೀಲನೆ ನಡೆಸಿದರು.



