ದ.ಕ.ಜಿಲ್ಲೆಯಲ್ಲಿ ಎನ್ ಐಎ ಅಧಿಕಾರಿಗಳು ಮತ್ತೆ ಭೇಟೆ ಆರಂಭಿಸಿದ್ದು, ಒಟ್ಟು 5 ಮಂದಿಯ ಮನೆಗಳಿಗೆ ದಾಳಿ ನಡೆಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಮೇಲ್ಕಾರಿನ ಬೋಗೋಡಿ ನಿವಾಸಿ ಇಬ್ರಾಹಿಂ ನಂದಾವರ, ವಳಚ್ಚಿಲ್ ಪದವಿನ ಮುಸ್ತಾಕ್ ಹಾಗೂ ಕಿನ್ಯಾದ ಇಬ್ರಾಹಿಂ ಎಂಬವರ ಮನೆಸೇರಿದಂತೆ ಅವರ ಬೆಂಬಲಿಗರ ಮನೆಗಳ ಮೇಲೆ ಎನ್ ಐಎ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಉಳ್ಳಾಲ ಕಿನ್ಯಾದ ಇಬ್ರಾಹಿಂ ಕೇರಳದಲ್ಲಿ ಧಾರ್ಮಿಕ ಶಿಕ್ಷಕನಾಗಿದ್ದ ಪಿಎಫ್ ನಿಷೇಧದ ಬಳಿಕ ತಲೆ ಮರೆಸಿಕೊಂಡಿದ್ದಾನೆ. ಮೆಲ್ಕಾರಿನ ಇಬ್ರಾಹಿಂ ನಂದಾವರ ಕ್ಯಾಬ್ ಡ್ರೈವರ್ ಎಂಬ ಮಾಹಿತಿ ಲಭ್ಯವಾಗಿದೆ.
ಕೆಲ ಸಮಯದ ಹಿಂದೆ ಎನ್‌ಐಎ, ನಿಷೇಧಿತ ಪಿಎಫ್‌ಐ ಸಂಘಟನೆಯ ಫಂಡಿ0ಗ್ ನೆಟ್ವರ್ಕ್ ಅನ್ನು ಬೇಧಿಸಿತ್ತು. ಈ ವೇಳೆ ಬಂಧಿತರನ್ನು ವಿಚಾರಣೆ ನಡೆಸಿದಾಗ ಇಬ್ರಾಹಿಂ ಹೆಸರು ಪ್ರಸ್ತಾಪವಾಗಿತ್ತು. ಪಿಎಫ್‌ಐ ಫಂಡಿ0ಗ್ ನೆಟ್ವರ್ಕ್ ಗೆ ಇಬ್ರಾಹಿಂ ಲಿಂಕ್ ಇದೆ ಎಂಬುವುದು ತಿಳಿದು ಬಂದಿದೆ.



