ಮುಲ್ಕಿ: ಶಿವಳ್ಳಿ ಸ್ಪಂದನ ಮಂಗಳೂರು ವಲಯದ ಸಹಯೋಗದೊಂದಿಗೆ ಶಿವಳ್ಳಿ ಸ್ಪಂದನ ಪಾವಂಜೆ ಸಹಭಾಗಿತ್ವದಲ್ಲಿ ಪ್ರತಿಭಾ ಪುರಸ್ಕಾರ -2023 ಕಾರ್ಯಕ್ರಮ ಹಳೆಯಂಗಡಿ ಶ್ರೀ ರಾಮಾನುಗ್ರಹ ಸಭಾಗೃಹ ದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವೇ.ಮೂ. ಸುಬ್ರಹ್ಮಣ್ಯ ರಾವ್ ತೋಕೂರು ರವರು ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ಇಂದಿನ ದಿನಗಳಲ್ಲಿ ರಾಷ್ಟ್ರ ನಮಗೇನು ಮಾಡಿದೆ ಎಂದು ಕೇಳುವುದಕ್ಕಿಂತ ರಾಷ್ಟ್ರದಲ್ಲಿ ಸುಭಿಕ್ಷೆಗಾಗಿ ನಾವು ತ್ಯಾಗ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಅವರು ಮಾತನಾಡಿ ಇಂದಿನ ಯುಗದಲ್ಲಿ ಕಲಿಕೆಗೆ ಅನೇಕ ಮೂಲಭೂತ ಸೌಕರ್ಯಗಳು ದೊರೆಯುತ್ತಿದ್ದು ಮಕ್ಕಳು ದೃಢ ಸಂಕಲ್ಪದಿಂದ ಶಿಕ್ಷಣ ಪಡೆದರೆ ಸಾಧಕರಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಳ್ಳಿ ಸ್ಪಂದನ ಮಂಗಳೂರು ವಲಯದ ಅಧ್ಯಕ್ಷ ಕೃಷ್ಣ ಭಟ್ ಕದ್ರಿ ವಹಿಸಿ ಮಾತನಾಡಿ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಧಾರ್ಮಿಕ ಚಿಂತಕ ಅಂಗಡಿಮಾರು ದೇವೇಶ್ ಭಟ್ ಸುರತ್ಕಲ್ ಎನ್ ಐ ಟಿ ಕೆ ಡೀನ್ ಶ್ರೀಕಾಂತ್ ಎಸ್ ರಾವ್ , ಕಟೀಲು ಕಾಲೇಜಿನ ಉಪನ್ಯಾಸಕ ವಾಧಿರಾಜ ರಾವ್,ನಿವೃತ್ತ ಶಿಕ್ಷಕ ರಾಜಕುಮಾರ ಕೊಳುವೈಲು, ಕಾರ್ಯದರ್ಶಿ ಗಣೇಶ್ ಹೆಬ್ಬಾರ್, ಕೇಂದ್ರೀಯ ವಲಯದ ಉಸ್ತುವಾರಿ ಗಣೇಶ್ ತಂತ್ರಿ, ತಾಲೂಕು ವಲಯದ ಮಹಿಳಾ ಘಟಕದ ಅಧ್ಯಕ್ಷೆ ರಮಾಮಣಿ, ಪಾವಂಜೆ ವಲಯದ ಅಧ್ಯಕ್ಷ ಸತೀಶ್ ಭಟ್, ಕಾರ್ಯದರ್ಶಿ ಪ್ರಸನ್ನ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಸುಧಾಮಣಿ, ಮಾಧ್ಯಮ ಪ್ರತಿನಿಧಿ ಮೋಹನ್ ರಾವ್ ಪಾವಂಜೆ, ಮತ್ತಿತರರು ಉಪಸ್ಥಿತರಿದ್ದರು ಭಾವನಾ ವಿಷ್ಣುಮೂರ್ತಿ ಕೆರೆ ಮಠ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಹಾಗೂ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…