ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವ0ತೆ, ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿ ಪುತ್ತೂರು ಪರಿವಾರದಿಂದ ಬೃಹತ್ ಪ್ರತಿಭಟನೆ ನಡೆಯಿತು.

ಪುತ್ತೂರಿನ ದರ್ಬೆ ವೃತ್ತದಿಂದ ಪಾದಾಯಾತ್ರೆಯ ಮೂಲಕ ತೆರಳಿದ ಕಾರ್ಯಕರ್ತರು ಸರಕಾರಿ ಬಸ್ ನಿಲ್ದಾಣದ ಬಳಿ ಸೇರಿ ಸುಮಾರು 10 ನಿಮಿಷ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಇನ್ನೂ ಇದೇ ವೇಳೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸೌಜನ್ಯಳ ಕೊಲೆಯಾಗಿ ಹನ್ನೊಂದು ವರ್ಷಗಳು ಕಳೆದರು ಆಕೆಯ ನೈಜ ಕೊಲೆಗಾರ ಯಾರು ಅನ್ನೋದು ಈವರೆಗೂ ಪತ್ತೆಯಾಗಿಲ್ಲ. ಆರೋಪಿ ಎಂದು ಬಂಧಿಸಲ್ಪಟ್ಟ ಸಂತೋಷ್ ರಾವ್ ನಿರ್ದೋಷಿ ಎಂದು ನ್ಯಾಯಾಲಯವೇ ಆದೇಶ ನೀಡಿರುವಾಗ ನೈಜ ಆರೋಪಿ ಯಾರು ಅನ್ನೋದು ಪತ್ತೆಯಾಗಬೇಕು. ಆ ಕಾರಣಕ್ಕೆ ಪ್ರಕರಣವನ್ನು ಸರಕಾರ ಕೂಡಲೇ ಮರು ತನಿಖೆ ನಡೆಸಬೇಕು. ಸರಕಾರ ಈ ವಿಚಾರದಲ್ಲಿ ಮೀನಾಮೇಷ ಎಣಿಸಿದರೆ ಸೌಜನ್ಯ ವಿಚಾರದಲ್ಲಿ ಸರಕಾರ ಪತನವೂ ಆಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ



