ಡಿವೈಡರ್ ಏರಿ ಬಂದು ಬೈಕ್ ಗೆಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಕಟಪಾಡಿಯಲ್ಲಿ ನಡೆದಿದೆ.

ಕಾಪು ತಾಲೂಕಿನ ಎರ್ಮಾಳ್ ನಿವಾಸಿ ಧೀರಜ್ ಮತ್ತು ಪವಿತ್ರ ದಂಪತಿ ಗಾಯಗೊಂಡವರು.
ಮಣಿಪಾಲದ ಖಾಸಗಿ ಕಂಪನೀ ಒಂದರಲ್ಲಿ ಕೆಲಸ ಮಾಡುತ್ತಿರುವ ಇವರು ಕೆಲ್ಸಕ್ಕೆ ತೆರಳುತಿದ್ದ ವೇಳೆ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಬೈಕ್ ಸವಾರಿಬ್ಬರನ್ನು ಸಮಾಜ ಸೇವಕ ಆಸ್ಟಿನ್ ಕೋಟ್ಯಾನ್ ಸ್ಥಳೀಯ ರಿಕ್ಷಾದ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




