ಹಳೆಯ0ಗಡಿ: ತುಳುನಾಡಿನ ತಿಂಗಳಲ್ಲಿ ಆಟಿ ಬಹಳ ಕಷ್ಟದ ಕಾಲ. ಆ ಕಾಲದ ಆಚರಣೆಗಳೂ ಇವತ್ತಿಗೂ ಪ್ರಸ್ತುತ. ಅಂತಹ ಆಚರಣೆಗಳು ವೇದಿಕೆಗೆ ಮಾತ್ರ ಸೀಮಿತಗೊಳಿಸದೆ, ನಿಜಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯಕ್ಷಲಹರಿ ಕಿನ್ನಿಗೋಳಿಯ ಸದಸ್ಸರೂ, ಕಲ್ಲಮುಂಡ್ಕೂರಿನ ನಿವೃತ್ತ ಪ್ರಾಧ್ಯಾಪಕರಾದ ವಸಂತ ದೇವಾಡಿಗ ಪಂಜ ಕರೆಕೊಟ್ಟರು.

ಅವರು ದೇವಾಡಿಗ ಸಮಾಜ ಸಮಾಜ ಸೇವಾ ಸಂಘ (ರಿ), ಪಾವಂಜೆಯ ಆಶ್ರಯದಲ್ಲಿ, ದೇವಾಡಿಗ ಯುವ ವೇದಿಕೆ ಪಾವಂಜೆ ಮತ್ತು ದೇವಾಡಿಗ ಸೇವಾ ಟ್ರಸ್ಟ್ (ರಿ) ಪಾವಂಜೆ ಇವರ ಸಹಯೋಗದಲ್ಲಿ, ದೇವಾಡಿಗ ಮಹಿಳಾ ವೇದಿಕೆ ಪಾವಂಜೆ ಇವರ ನೇತೃತ್ವದಲ್ಲಿ ನಡೆದ ಆಟಿಡೊಂಜಿ ಐತಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಶ್ರೀ ಬೆನೆಟ್ ಜಿ.ಅಮ್ಮಣ್ಣ ಆಟಿ ಆಚರಣೆಗಳು ಮತ್ತು ಗಿಡಮೂಲಿಕೆಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಸುಧಾಕರ ಆರ್.ಅಮೀನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ದೇವಾಡಿಗ ಮಹಿಳಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಶುಭ್ರತ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಆಟಿಯ ಖಾದ್ಯಗಳನ್ನು ತಯಾರಿಸಿದ ಮಾತೆಯರನ್ನು ಅಭಿನಂದಿಸಿದರು.



