77ನೇ ಸ್ವಾತಂತ್ರ‍್ಯೋತ್ಸದವ ಹಿನ್ನಲೆ ಧ್ವಜಾರೋಹಣ ವೇಳೆ ಕಲಬುರಗಿಯಲ್ಲಿ ಜೆಡಿಎಸ್ ಮುಖಂಡರು ಎಡವಟ್ಟು ಮಾಡ್ಕೊಂಡಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ಧ್ವಜಾರೋಹಣ ವೇಳೆ ರಾಷ್ಟ್ರ ಧ್ವಜ ಉಲ್ಟಾ ಹಾರಿಸಿದ್ದಾರೆ.

ಕಲಬುರಗಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ್ ಮಹಾಗಾಂವಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯುತ್ತಿತ್ತು. ಈ ವೇಳೆ ಉಲ್ಟಾ ಧ್ವಜಾರೋಹಣ ಮಾಡಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಅವರು ಧ್ವಜ ಅವರೋಹಣ ಮಾಡಿ ಮತ್ತೆ ಆರೋಹಣ ಮಾಡಿದ್ದಾರೆ.



