ದಕ್ಷಿಣ ಕನ್ನಡ :ಕರಾಡ ಬ್ರಾಹ್ಮಣ ಸುಧಾರಕ ಸಂಘ ಶ್ರೀನಿವಾಸಪುರ ಗುಂಡ್ಯಡ್ಕ ಮೂಡಬಿದ್ರೆ ಇದರ 55ನೇ ವರ್ಷದ ಮಹಾಸಭೆಯು ಗುಂಡ್ಯಡ್ಕ ವಿಠೋಬಾ ರುಕುಮಾಯಿ ದೇವಸ್ಥಾನದ ಆವರಣದಲ್ಲಿರುವ ನೂತನ ಸಭಾಭವನದಲ್ಲಿ ವಿದ್ಯುಕ್ತವಾಗಿ ಜರುಗಿತು.

ಸಭಾಧ್ಯಕ್ಷತೆಯನ್ನು ಕರಾಡ ಬ್ರಾಹ್ಮಣ ಸುಧಾರಕ ಸಂಘ ಇದರ ಅಧ್ಯಕ್ಷರಾದ ರಾಮಚಂದ್ರ ನಾಟೇಕರ್ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಕರಾಡ ಬ್ರಾಹ್ಮಣ ಸುಧಾರಕ ಸಂಘ ಇದರ ಗೌರವಾಧ್ಯಕ್ಷರಾದ ವೇದಮೂರ್ತಿ ಗಿರಿಧರ ಭಟ್ಟ ಮಂಗಳೂರು, ವಿಠೋಬಾ ರುಕುಮಾಯಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಪಾಂಡುರಂಗ ಸಪ್ರೆ, ದೇವಸ್ಥಾನದ ಕಾರ್ಯದರ್ಶಿ ರಮೇಶ್ ಪರಾಡ್ಕರ್, ಮಹಿಳಾ ಘಟಕದ ಅಧ್ಯಕ್ಷರಾದ ಗೀತಾ ಸಪ್ರೆ, ಕೋಶಾಧಿಕಾರಿ ಪ್ರಭಾಕರ ಬಾಟೆ, ಉಡುಪಿ ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಪಾಂಡುರಂಗ ಲಾಗ್ವಾಕರ್, ಬೆಂಗಳೂರು ಕರಾಡ ಬ್ರಾಹ್ಮಣ ಸುಧಾರಕ ಸಂಘದ ಅಧ್ಯಕ್ಷರಾದ ಅಶೋಕ ಮುಂಡಕ್ಕಾನ, ಆಗಮಿಸಿದ್ದರು ಪ್ರಶಾಂತ ನಾಟೇಕರ್ ಕುಕ್ಕುಡೇಲು ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಉಪಾಧ್ಯಾಯ ಇವರು “ಸಮಾಜದಲ್ಲಿ ಬ್ರಾಹ್ಮಣರು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು ದೇವಸ್ಥಾನದ ವಠಾರದಲ್ಲಿ ನಿರ್ಮಿಸಲಾದ ನೂತನ ಸಭಾಭವನಕ್ಕೆ “ರುಕ್ಮಿಣಿ ಪಾಂಡುರಂಗ ಸಭಾಭವನ” ಎಂಬ ನೂತನ ನಾಮಕರಣವನ್ನು ಪಾಂಡುರಂಗ ಸಪ್ರೆ ಹಾಗೂ ರಮೇಶ್ ಪರಾಡ್ಕರ್ ಹಾಗೂ ಸಮಾಜದ ಗಣ್ಯರು ನಾಮಕರಣ ಮಾಡಿದರು.
ಈ ಸಂದರ್ಭದಲ್ಲಿ ಕರಾಡ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು, ಸಮಾಜದ ಸಭಿಕರ ಪರವಾಗಿ ಡಾಕ್ಟರ್ ಮಂದಾರ ರಾಜೇಶ್ ಭಟ್ಟರು ಮಾತನಾಡಿದರು ಇದೇ ಸಂದರ್ಭದಲ್ಲಿ ಸಮಾಜದ ಶ್ರೇಯಸ್ಸನ್ನ ಬಯಸುವ ಅರುಣ ಲೋಕ್ರೆ ಅವರು ಪ್ರತಿಭಾ ಪುರಸ್ಕಾರಕ್ಕಾಗಿ ತನ್ನ ವೈಯಕ್ತಿಕ ನಿಧಿಯಾಗಿ ರೂಪಾಯಿ 77, ಸಾವಿರ ಚೆಕ್ ಮುಖಾಂತರ ದೇಣಿಗೆ ನೀಡಿದರು, ನಾಳೆ ದಿನಾಂಕ 16 ರಂದು ಪುರುಷೋತ್ತಮ ಮಾಸದ ಕೊನೆಯ ದಿನವಾಗಿದ್ದು ನಿರಂತರವಾಗಿ ಕಳೆದ ಒಂದು ತಿಂಗಳಿನಿಂದ ಏರ್ಪಲೆ ಸುಬ್ರಮಣ್ಯ ಭಟ್ ಪರಾಡ್ಕರ್ ಇವರ ನೇತೃತ್ವದಲ್ಲಿ ವಿಠೋಬಾ ರುಕುಮಾಯಿ ದೇವಸ್ಥಾನ ಇಲ್ಲಿ ಆಚರಿಸಿಕೊಂಡು ಬರುತ್ತಿದ್ದ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ ಪುನಸ್ಕಾರಗಳು, ಸಂಪನ್ನಗೊಳ್ಳಲಿದ್ದು, ಸಮಾರೋಪ ಸಮಾರಂಭ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ಸು ಗೊಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಗುಂಡ್ಯಡ್ಕ ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘದ ಕಾರ್ಯದರ್ಶಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷ ರಾಮಚಂದ್ರ ಪಂಡಿತ್ ಧನ್ಯವಾದಗಳು ನೀಡಿದರು.







