ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಸಾಮಾಜಿಕ ಜಾಲತಾಣದಲ್ಲಿ ವೈವಿಧ್ಯಮಯ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ರು.

ಇದೀಗ ತಮ್ಮ ರಾಜ್ಯದಲ್ಲಿನ ಹಳ್ಳಿಗಳಲ್ಲಿ ಜನರು ಬಿದಿರನ್ನು ಬಳಸಿ ಪರಿಸರ ಸ್ನೇಹಿ ‘ವಾಶ್ ಬೇಸಿನ್’ ತಯಾರಿಸಿರುವ ಕುರಿತು ವಿಡಿಯೋವನ್ನು ಹಂಚಿಕೊ0ಡಿದ್ದಾರೆ.

ಪರಿಸರದಲ್ಲಿ ದೊರಕುವ ವಸ್ತುಗಳನ್ನೇ ಬಳಸಿಕೊಂಡು ತುಂಬಾ ಕೌಶಲ್ಯಯುತವಾಗಿ ತಯಾರಿಸಿರುವ ಈ ವಾಶ್ ಬೇಸಿನ್ ಬಗ್ಗೆ ಇಮ್ನಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

“ಇದು ಬಿದಿರನ್ನು ಬಳಸಿ ಕಂಡು ಹಿಡಿದಿರುವ ನೂತನ ವಾಶ್ ಬೇಸಿನ್, ಶೇ.100ರಷ್ಟು ನೈಸರ್ಗಿಕವಾಗಿದೆ. ಇದರ ಬಳಕೆಯಿಂದ ಪರಿಹಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ನಾಗಾಲ್ಯಾಂಡ್ ಜನರು ತಮ್ಮ ಹಳ್ಳಿಗಳಲ್ಲಿ ಇಂತಹ ಪರಿಸರ ಸ್ನೇಹಿ ವಾಶ್ ಬೇಸಿನ್ ಗಳನ್ನು ತಯಾರಿಸಿ ಬಳಸುತ್ತಿದ್ದಾರೆ. ಪರ್ವತ ಪ್ರದೇಶದಿಂದ ಹರಿದು ಬರುವ ನೀರನ್ನು ಬಿದಿರಿನ ಮೂಲಕ ಹಾಯಿಸಿ ಅದಕ್ಕೆ ರಂಧ್ರಗಳನ್ನು ಕೊರೆದು ತಮಗೆ ಅಗತ್ಯವಿದ್ದಾಗ ರಂಧ್ರಕ್ಕೆ ಸಿಕ್ಕಿಸಿದ ಮರದ ತಂಡುಗಳನ್ನು ಹೊರತೆಗೆದು ಕೈ, ಕಾಲುಗಳನ್ನು ತೊಳೆದುಕೊಳ್ಳಬಹುದಾಗಿದೆ. ನಂತರ ಪುನಃ ಮರದ ಚೂಪಾದ ತುಂಡನ್ನು ರಂಧ್ರವನ್ನು ಮುಚ್ಚುತ್ತಾರೆ” ಎಂಬುದಾಗಿ ಇಮ್ನಾ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.



