ಟ್ರೆಂಡ್‌ಗಳನ್ನು ಸೃಷ್ಟಿಸುವ ರೀತಿಯ ಹೊಸ ಹೊಸ ಅವತಾರಗಳನ್ನು ಕೆಲವರು ಇಷ್ಟಪಡೋದು, ಅದಕ್ಕಾಗಿ ಬದಲಾಗೋದನ್ನ ನೋಡಿರುತ್ತೀರಿ, ಆದರೆ ಮನುಷ್ಯನೆಂದಾದರೂ ಶ್ವಾನವಾಗಿ ಬದಲಾಗೋದನ್ನ ನೋಡಿದ್ದೀರಾ?

ಜಪಾನ್ ಮೂಲದ ವ್ಯಕ್ತಿಯೊಬ್ಬ 12 ಲಕ್ಷ ರೂ.ಗಳನ್ನ ಖರ್ಚು ಮಾಡಿ, ಶ್ವಾನವಾಗಿ ಬದಲಾಗಿದ್ದಾನೆ !

ಆತನ ವಿಡಿಯೊ ಈಗ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಟೋಕೋ ಎಂಬಾತನಿಗೆ ಮೊದಲಿಂದಲೂ ಶ್ವಾನದ ಜೀವನದ ಅನುಭವವನ್ನು ಪಡೆಯಬೇಕೆಂಬ ಆಸೆ ಇತ್ತಂತೆ.

ಈ ಹಿನ್ನೆಲೆಯಲ್ಲಿ ಥೇಟ್ ನಿಜವಾದ ಶ್ವಾನದಂತೆಯೇ ಕಾಣುವ ಹೈಪರ್ ರಿಯಲಾಸ್ಟಿಕ್ ಎನ್ನುವ ಡಾಗ್ ಕಾಸ್ಟ್ವೂಮ್ ಅನ್ನು 40 ದಿನ ತಯಾರಿಸಿ, ಅದನ್ನು ಧರಿಸಿ ಪಾರ್ಕ್ಗೆ ವಾಕಿಂಗ್ ಹೋಗಿದ್ದಾರೆ. ಶ್ವಾನವೇ ಎನ್ನುವಷ್ಟು ನೈಜವಾಗಿ ಕಾಣುತ್ತಿರುವ ಆತನೊಂದಿಗೆ ಇತರೆ ಶ್ವಾನಗಳೂ ಬೆರೆಯುವ ವಿಡಿಯೊ ವೈರಲ್ ಆಗಿದೆ.



