ಶ್ರೀ ಗಜಾನನ ಸ್ಪೋರ್ಟ್ಸ್ ಕ್ಲಬ್ (ರಿ) ತೋಕೂರು ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಯಿತು. ಧ್ವಜಾರೋಹಣವನ್ನು ನಿವೃತ್ತ ಶಿಕ್ಷೆಕಿ ಭುವನೇಶ್ವರಿ ವ್ಯಾಸರಾಯ ಶೆಟ್ಟಿಗಾರ್ ಕಲ್ಲಾಪು ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಆಗಿರುವ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರಾದ ನವೀನ್ ಶೆಟ್ಟಿಗಾರ್ ಅಧ್ಯಕ್ಷರಾದ ರಾಮಕೃಷ್ಣ ಶೆಟ್ಟಿಗಾರ್ ಉಪಸ್ಥಿತರಿದ್ದರು.




