ದೇವರಮನೆ ಗುಡ್ಡ ಪ್ರವಾಸಿ ತಾಣದ ಬಳಿ ಪ್ರವಾಸಿಗರು ಮದ್ಯ ಸೇವಿಸಿ ರಸ್ತೆ ಬದಿ ಕುಣಿದು ಮೋಜು ಮಸ್ತಿ ಮಾಡಿದ ಘಟನೆ ನಡೆದಿದೆ.
ಐತಿಹಾಸಿಕ ಕಾಲಭೈರವೇಶ್ವರ ಸ್ವಾಮಿ ದೇಗುಲದ ಬಳಿಯೇ ಪ್ರವಾಸಿಗರು ಮದ್ಯ ಸೇವಿಸಿ ನೃತ್ಯ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣವಾದ ದೇವರಮನೆಗುಡ್ಡಗೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕುಟುಂಬ ಸಮೇತ ಭೇಟಿ ನೀಡುವ ಸುಂದರ ಸೊಬಗಿನ ತಾಣ ಇದಾಗಿದ್ದು ಪ್ರವಾಸಿಗರ ವರ್ತನೆಗೆ ಇಲ್ಲಿ ಬಂದ ಇತರ ಪ್ರವಾಸಿಗರಿಗೆ ಇರುಸು ಮುರಿಸು ಆದಂತಾಗಿದೆ.
ರಸ್ತೆ ಬದಿ ಮದ್ಯ ಸೇವಿಸಿ ಪ್ರವಾಸಿಗರು ನೃತ್ಯ ಮಾಡಿದ್ದು ಅಲ್ಲಿದ್ದ ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ಯುವಕರ ವರ್ತನೆಯನ್ನು ಸೆರೆ ಹಿಡಿದಿದ್ದಾರೆ.
ಅಲ್ಲದೆ ಪ್ರವಾಸಿ ತಾಣಗಳಲ್ಲಿ ಈ ರೀತಿ ದುರ್ವರ್ತನೆ ತೋರಿದ ಪ್ರವಾಸಿಗರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.



