ಮಾಳಕೊಡಂಗೆ: 77ನೇ ಸ್ವಾತಂತ್ರ‍್ಯೋತ್ಸವ ದಿನಾಚರಣೆಯಂದು ಅಯ್ಯಪ್ಪ ನಗರ ಶಾಲೆಗೆ ವರ್ಗಾವಣೆಗೊಂಡ ಮುಖ್ಯ ಶಿಕ್ಷಕಿ ರೇವತಿ ಇವರ ಬಿಳ್ಕೊಡುಗೆ ಸಮಾರಂಭವು ವಿಜೃಂಬಣೆಯಿಂದ ನಡೆಯಿತು.
ಶಾಲಾ ಹಳೆ ವಿದ್ಯಾರ್ಥಿ ‘ಕನ್ನಡ ಕೌಸ್ತುಭ’ ರಾಜ್ಯ ಪ್ರಶಸ್ತಿ ವಿಜೇತ ನಿಕೇಶ್ ಪೂಜಾರಿಯವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೊಡಂಗೆ ಮನೆತನದ ಶರತ್ಚಂದ್ರ ಬಲ್ಲಾಳ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಅಶೋಕ್ ಬಲ್ಲಾಳ್ ಮಾಳ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ರವೀಶ್ ರಾಜ್ ಹಲ್ಮಾ, ಗ್ರಾಮ ಪಂಚಾಯತಿ ಸದಸ್ಯರಾದ ಸುಧೀರ್ ಶೆಟ್ಟಿ, ಶಶಿಕಲಾ ಪೂಜಾರಿ ಮಾಳ, ಕೆರ್ವಶಿ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಅನಿಲ್ ಎಸ್ ಪೂಜಾರಿ, ಶಿಕ್ಷಣ ಸಂಯೋಜಕರಾದ ಬಾಲಕೃಷ್ಣ ನಾಯಕ್, ಪ್ರಾ. ಶಾಲಾ ಶಿಕ್ಷಕ ಸಂಘದ ಜಿಲ್ಲಾ ಕಾರ್ಯದರ್ಶಿ ಸಂಜೀವ ದೇವಾಡಿಗ ಮುಖ್ಯ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರು ಕೃಷ್ಣ ಮೊಯ್ಲಿ ಧ.ಗ್ರಾ. ಯೋಜನೆಯ ಸೇವಾ ಪ್ರತಿನಿಧಿ ಜಯಲಕ್ಷ್ಮಿ, ಕ್ಷೇತ್ರದ ಗ್ರಾಹಕ ಯೋಜನೆಗೆ ಒಕ್ಕೂಟ ಅಧ್ಯಕ್ಷರಾದ ಪ್ರವೀಣ್ ಹೆಗ್ಡೆ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಉಮೇಶ್ ಪೂಜಾರಿ ಸ್ವಾಗತಿಸಿದ್ದು, ಯೋಜನೆ ಒಕ್ಕೂಟ ಅಧ್ಯಕ್ಷರಾದ ದಿನೇಶ್ ಪೂಜಾರಿ ವಂದಿಸಿದ್ದಾರೆ.
ಸಹ ಶಿಕ್ಷಕಿ ಪೂರಿಮಾರ ಅವರು ಕಾರ್ಯಕ್ರಮ ನಿರೂಪಿಸಿದರು ಎಸ್‌ಡಿಎಂ ಮಾಜಿ ಅಧ್ಯಕ್ಷರಾದ ಗಣೇಶ್ ಪೂಜಾರಿ ಕೋಂಟಡ್ಕ, ಗಣೇಶ್ ಪೂಜಾರಿ ಕಲ್ಪತರು, ಗಣೇಶ್ ಪೂಜಾರಿ ಕಟೀಲೇಶ್ವರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾರೆ.



