ಸದಾ ನಗುಮುಖದಿಂದ ಎಲ್ಲರ ನೋವಿಗೂ ಸ್ಪಂದಿಸೋ ವ್ಯಕ್ತಿತ್ವ ಹೊಂದಿರುವ ಸರಳ ಜೀವಿ. ರಿಯಾಲಿಟಿ ಶೋಗಳಲ್ಲಿ ಲವಲವಿಕೆಯಿಂದ ಇರುತ್ತಿದ್ದ ರಾಘು ಜೀವನದ ನಗುವೆ ಮಾಯವಾಗಿದೆ.
ಇಂತಹ ಸಂದರ್ಭದಲ್ಲಿ ಮತ್ತೆ ರಾಘು ರಿಯಾಲಿಟಿ ಶೋಗೆ ಬರುತ್ತಾರಾ? ಅವರ ಆ ಪ್ರೀತಿ ತುಂಬಿದ ಮಾತುಗಳನ್ನ ಕೇಳಬಹುದಾ ಅನ್ನೋದು ಎಷ್ಟೋ ಅಭಿಮಾನಿಗಳಲ್ಲಿ ಪ್ರಶ್ನೆಯೊಂದು ಮೂಡಿದೆ. ಜೀ ಕನ್ನಡದ ಡ್ರಾಮಾ ಜೂನಿಯರ್ಸ್, ಡಿಕೆಡಿ, ಸೂಪರ್ ಕ್ವೀನ್, ಕಲರ್ಸ್ನ ಡ್ಯಾನ್ಸಿಂಗ್ ಚಾಂಪಿಯನ್ ಸೇರಿದಂತೆ ಹಲವು ಶೋಗಳಲ್ಲಿ ಜಡ್ಜ್ ಸೀಟ್‌ನ್ನು ನಟ ವಿಜಯ್ ರಾಘವೇಂದ್ರ ಅಲಂಕರಿಸಿದ್ದಾರೆ.
ಸದ್ಯ ಡಿಕೆಡಿಗೆ ಮತ್ತೆ ಕಮ್ ಬ್ಯಾಕ್ ಮಾಡಿದ್ದ ರಾಘು, ತುಂಬಾನೇ ಆ್ಯಕ್ಟಿವ್ ಆಗಿದ್ದರು. ಅವರ ಈ ಎನರ್ಜಿ ಹಿಂದಿನ ಶಕ್ತಿ ಪ್ರೀತಿಯ ಮಡದಿ ಸ್ಪಂದನಾ ಅವರು 37ನೇ ವಯಸ್ಸಿಗೆ ಹೃದಯಾಘಾತದಿಂದ ಆಗಸ್ಟ್ 7ರಂದು ವಿಧಿವಶರಾಗಿದ್ದಾರೆ. ಈಗ ಆ ಶಕ್ತಿಯನ್ನ ಕಳೆದುಕೊಂಡ ನೋವಿನಲ್ಲಿರುವ ನಟ ವಿಜಯ್ ರಾಘವೇಂದ್ರ ಅವರು ಸದ್ಯಕ್ಕೆ ಡಿಕೆಡಿಯಿಂದ ದೂರ ಉಳಿಯೋ ಚಾನ್ಸ್ ಇದೆ. ಹೌದು, ಅಪ್ಪು ಮಾಮನ ಅಗಲಿಕೆಯ ನೋವನ್ನೇ ಇನ್ನೂ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ. ಅಪ್ಪು ಬಗ್ಗೆ ಮಾತು ಬಂದಾಗೆಲ್ಲ ಬಿಕ್ಕಿಬಿಕ್ಕಿ ಮಗು ಥರಹ ಕಣ್ಣೀರಿಟ್ಟಿರೋದನ್ನ ಫ್ಯಾನ್ಸ್ ನೋಡಿದ್ದಾರೆ. ಆ ನೋವಿನ ಗಾಯದ ಮೇಲೆ ಮತ್ತೊಂದು ಬರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪತ್ನಿಯ ಅಗಲಿಕೆ.
ಫ್ಯಾಮಿಲಿ ಜೊತೆ ತುಂಬಾನೇ ಅಟ್ಯಾಚ್ ಆಗಿರೋ ರಾಘು, ಭಾವುಕ ಜೀವಿ. ಶೋಗಳಲ್ಲಿ ಕುಟುಂಬದವರ ಬಗ್ಗೆ ಮಾತನಾಡುತ್ತಾ ಭಾವುಕರಾಗುತ್ತಿದ್ದರು. ಮೊನ್ನೆ ತಮ್ಮ ಸಹೋದರಿ ಬಗ್ಗೆ ಮಾತನಾಡಿದ್ದರು. ಈಗ ಪ್ರೀತಿಯ ಮಡದಿ ಇನ್ನಿಲ್ಲ ಅನ್ನೋ ನೋವಿನ ಜೊತೆಗೆ ಮಗನ ಭವಿಷ್ಯ ರಾಘು ಹೆಗಲ ಮೇಲಿದೆ. ಎಲ್ಲಾ ನೋವುಗಳನ್ನ ಮರೆತು ಮಗ ಶೌರ್ಯನಿಗಾಗಿ ಬದುಕನ್ನ ಮತ್ತೆ ಕಟ್ಟಿಕೊಳ್ಳುವ ಸ್ಥೈರ್ಯವನ್ನ ತೆಗೆದುಕೊಳ್ಳಬೇಕಿದೆ. ಕಲಾವಿದರ ಶಕ್ತಿ, ಸ್ಥೈರ್ಯನೇ ಅವರ ಕೆಲಸ. ರಾಘು ಕೂಡ ತಮ್ಮ ಕೆಲಸವನ್ನ ದೈವದಂತೆ ಪೂಜಿಸುವ ವ್ಯಕ್ತಿ. ಹೀಗಾಗಿ ಕೊಂಚ ಗ್ಯಾಪ್‌ನ ನಂತರ ಮತ್ತೆ ಶೋಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಒಟ್ಟಿನಲ್ಲಿ ಎಂದಿಗೂ ಮಾಸದ ಘಾಡವಾದ ಗಾಯ ರಾಘು ಮನಸ್ಸಿಗಾಗಿದೆ. ಆದಷ್ಟು ಬೇಗ ರಾಘು ಈ ನೋವಿನಿಂದ ಹೊರಬರುವಂತಾಗಲಿ ಮತ್ತೆ ಎಲ್ಲರ ಜೊತೆ ಬರೆಯುವಂತಾಗಲಿ ಅನ್ನೋದು ಅಭಿಮಾನಿಗಳ ಆಶಯ.
ಆಟಿ ಅಮಾವಾಸ್ಯೆಯ ಪ್ರಯುಕ್ತ ತಾಲೂಕಿನ ಪ್ರಸಿದ್ಧ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಬುಧವಾರ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ವಿವಿಧ ಧಾರ್ಮಿಕ…
ಮಿಜಾರ್ ಸಮೀಪ ಬಾಡಿಗೆ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಮೂವರು ಗಾಯಗೊಂಡ ಘಟನೆ ನಡೆದಿದೆ. ಘಟನೆಯಲ್ಲಿ ಆಳ್ವಾಸ್ ಕಾಲೇಜಿನ ಕೆಲಸಗಾರ ಶಿವರಾಮ,…
ನೀಟ್ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಕೋಚಿಂಗ್ ಸೆಂಟರ್‌ನ ಹಾಸ್ಟೆಲ್‌ನಲ್ಲಿ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದ ದುರಂತ ಮಾಸುವ ಮುನ್ನವೇ,…
ಕೊಲಂಬಿಯಾದ ಪಶ್ಚಿಮ ಭಾಗದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 111 ಮಂದಿ ಮೃತಪಟ್ಟಿದ್ದಾರೆ. 87ಕ್ಕೂ ಹೆಚ್ಚು ಮಂದಿ…
ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ಸೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಸಮೀಪದ…
ಪಾದಚಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಲಪಾಡಿಯಲ್ಲಿ ನಡೆದಿದೆ. ಗದಗ ನಿವಾಸಿ ಶರಣಪ್ಪ ಗಂಭೀರ…