ಮಾಲಿವುಡ್ ಸಿನಿಮಾ ರಂಗದ ಜನಪ್ರಿಯ ನಟ ಟೊವಿನೋ ಥಾಮಸ್ ಅವರು ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ತನ್ನ ಸಿನಿಮಾ ಸಂಬ0ಧಿತ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಟೊವಿನೋ ಥಾಮಸ್, ಇನ್ ಸ್ಟಾಗ್ರಾಮ್ ಬಳಕೆದಾರರೊಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡುವುದರ ಜೊತೆ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
ಕಳೆದ ಕೆಲ ಸಮಯದಿಂದ ಟೊವಿನೋ ಥಾಮಸ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಗಳಿಗೆ ವ್ಯಕ್ತಿಯೊಬ್ಬ ಆಕ್ಷೇಪಾರ್ಹ ಮತ್ತು ಅವಹೇಳನಕಾರಿಯಾಗಿ ಕಮೆಂಟ್ ಮಾಡುತ್ತಿದ್ದ. ಒಂದೆರೆಡು ಬಾರಿ ನೋಡಿ ಸುಮ್ಮನ್ನಿದ್ದ ನಟ ಥಾಮಸ್ ಈ ಬಾರಿ ಆತನ ವಿರುದ್ಧ ದೂರನ್ನು ನೀಡಿದ್ದಾರೆ.
ಪಣಂಗಾಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೊತೆಗೆ ಮಾನನಷ್ಟ ಮೊಕದ್ದೆಮೆಯನ್ನು ದಾಖಲಿಸಿದ್ದಾರೆ. ಆ ವ್ಯಕ್ತಿ ಮಾಡಿದ ಕಮೆಂಟ್‌ಗಳ ಲಿಂಕ್‌ಗಳನ್ನು ಪೊಲೀಸರಿಗೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ಪೊಲೀಸರು ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದು, ಇನ್‌ಸ್ಟಾ ಬಳಕೆದಾರನ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸರು ತನಿಖೆ ಆರಂಭಿದ್ದಾರೆ ಎಂದು ವರದಿ ತಿಳಿಸಿದೆ.
ಟೊವಿನೋ ಥಾಮಸ್ “ ಅಜಾಯನ್ತೇ ರಂದ ಮೋಷನಮ್” ಎನ್ನುವ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಬಳಿಕ ಅವರು ʼನಾಡಿಕರ್ ತಿಲಗಂʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಸೌಬಿನ್ ಶಾಹಿರ್ ಅವರು ಕೂಡ ನಟಿಸಲಿದ್ದಾರೆ. ಇದಾದ ಬಳಿಕ ʼಮಿನ್ನಲ್ ಮುರಳಿ -2ʼ ಸಿನಿಮಾ ಸಟ್ಟೇರಲಿದೆ.



