ಜನ ಮನದ ನಾಡಿ ಮಿಡಿತ

Advertisement

ಗುಂಡ್ಯಡ್ಕ ದೇವಸ್ಥಾನ: ಪುರುಷೋತ್ತಮ ಮಾಸ, ಧಾರ್ಮಿಕ ಆಚರಣೆಯ ಸಮಾರೋಪ, ಧಾರ್ಮಿಕ ಉಪನ್ಯಾಸ

ದಕ್ಷಿಣ ಕನ್ನಡ : ಶ್ರೀ ವಿಠೋಬ   ರುಕುಮಾಯಿ  ದೇವಸ್ಥಾನ ಶ್ರೀನಿವಾಸಪುರ ಗುಂಡ್ಯಡ್ಕ  ಮೂಡಬಿದಿರೆ, ಇಲ್ಲಿ ಒಂದು ತಿಂಗಳ ಕಾಲ ಪುರುಷೋತ್ತಮ ಮಾಸದ ಪ್ರಯುಕ್ತ ಎರ್ಪಲೆ ಸುಬ್ರಹ್ಮಣ್ಯ ಭಟ್ ಪರಾಡ್ಕರ್ ನೇತೃತ್ವದಲ್ಲಿ ಆಚರಿಸಿಕೊಂಡು ಬರುತ್ತಿದ್ದ ಧಾರ್ಮಿಕ, ಸಾಂಸ್ಕೃತಿಕ, ಉಪನ್ಯಾಸ ಮಾಲಿಕೆ, ಪೂಜೆ, ಭಜನೆ, ಹೋಮ, ಅನ್ನದಾನ ಯಶಸ್ವಿಯಾಗಿ ಸಂಪನ್ನಗೊಂಡು ದೇವಸ್ಥಾನದ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಿತು.

        ಸುಬ್ರಮಣ್ಯ ಭಟ್ ರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ, ವೇದಮೂರ್ತಿ ಹರಿನಾರಾಯಣ ಅಸ್ರಣ್ಣ ಕಟೀಲು ಇವರು ಧಾರ್ಮಿಕ ಉಪನ್ಯಾಸ ನೀಡಿದರು.

   ಸಭಾಧ್ಯಕ್ಷತೆಯನ್ನು ವಿಠೋಬಾ ರುಕುಮಾಯಿ  ಈ ದೇವಸ್ಥಾನದ ಅಧ್ಯಕ್ಷರಾದ ಪಾಂಡುರಂಗ ಸಪ್ರೆ ವಹಿಸಿದ್ದರು, ಸಭೆಯಲ್ಲಿ ಮಂಗಳೂರು ರಾಧಾಕೃಷ್ಣ ದೇವಸ್ಥಾನದ ವೇದಮೂರ್ತಿ ಗಿರಿಧರ ಭಟ್, ಉದ್ಯಮಿ ಶ್ರೀಪತಿ ಭಟ್, ಎಂಸಿಸಿ ಬ್ಯಾಂಕಿನ ಚಂದ್ರಶೇಖರ್ ರಾವ್, ರಾಮಚಂದ್ರ ಪವನಸ್ಕರ್, ಉಮೇಶ ಪರಾಡ್ಕರ್, ರಾಮಚಂದ್ರ ಪಂಡಿತ್, ಶಶಿಕಲಾ ಲೋಕ್ರೆ ಗೌರವ ಅತಿಥಿಗಳಾಗಿ ಆಗಮಿಸಿದ್ದರು.

     ಧಾರ್ಮಿಕ ಉಪನ್ಯಾಸ ನೀಡಿದ ಹರಿನಾರಾಯಣ ಅಸ್ರಣ್ಣ ಕಟೀಲು ಇವರು ಅತಿ ಕಡಿಮೆ ಜನ ಸಂಖ್ಯೆಯ ಕರಾಡ ಬ್ರಾಹ್ಮಣ ಸಮಾಜ, ಉತ್ತಮ ದೇವಸ್ಥಾನ ಹಾಗೂ ಧಾರ್ಮಿಕ ಕೆಲಸಗಳಿಗಾಗಿ ಪ್ರಸಿದ್ಧಿ ಪಡೆದಿದ್ದು, ಮುಂದಿನ ಪೀಳಿಗೆಗೆ ಮಾದರಿ ಎಂದರು ವೇದಮೂರ್ತಿ ಗಿರಿಧರ ಭಟ್ ಮಾತನಾಡಿ ವೇದ ಪುರಾಣಗಳು, ಶಾಸ್ತ್ರ ಗ್ರಂಥಗಳು  ಹೇಳಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕಿದೆ ಮತ್ತು ಸಮಾಜವನ್ನ ಮುನ್ನಡೆಸಬೇಕಿದೆ ಎಂದರು.

    ಉದ್ಯಮಿ ಶ್ರೀಪತಿ ಭಟ್ ಮಾತನಾಡಿ ತನ್ನ ಮತ್ತು ದೇವಸ್ಥಾನದ ಒಡನಾಟ, ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಬಗ್ಗೆ ವಿವರಿಸಿದರು,  ಶಶಿಕಲಾ ಲೋಕ್ರೆ   ಮಾತನಾಡಿ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಮಹಿಳೆಯರ ಭಾಗವಹಿಸುವಿಕೆ, ಮತ್ತು ಮಾನಸಿಕ ನೆಮ್ಮದಿಯನ್ನ ತಿಳಿಸಿದರು.

    ಕಾರ್ಯಕ್ರಮದ ಪ್ರಸಾರಕ್ಕಾಗಿ ಸಹಕರಿಸಿದ ಪತ್ರಕರ್ತ ಡಾಕ್ಟರ್ ರಾಜೇಶ್ ಭಟ್ ಮಂದಾರ ಇವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಣೆ, ಸ್ವಾಗತ, ಹಾಗೂ ಧನ್ಯವಾದಗಳು ಲಕ್ಷ್ಮಿಕಾಂತ್ ಭಟ್ ನೆರವೇರಿಸಿದರು.

Leave a Reply

Your email address will not be published. Required fields are marked *

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು.

error: Content is protected !!