ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ), ಇದರ ಆಶ್ರಯದಲ್ಲಿ ಮುಲ್ಕಿ ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್ (ರಿ), ಸುವರ್ಣ ಮಹೋತ್ಸವ ಸಮಿತಿ, ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಯುವತಿ ಮತ್ತು ಮಹಿಳಾ ಮಂಡಲ (ರಿ) ಹಳೆಯಂಗಡಿ ಇವರ ಸಹಕಾರದಲ್ಲಿ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಯುವಕ ಮಂಡಲದ ಸಭಾಂಗಣದಲ್ಲಿ ಸರಳವಾಗಿ ಜರುಗಿತು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ದೇಶ ಸೇವೆಯಲ್ಲಿ 17 ವರ್ಷ ಸೇವೆ ಸಲ್ಲಿಸಿರುವ ಮಾಜಿ ಸೈನಿಕರಾದ ನಾಗರಾಜ್ ಬಿ. ಪಡು ಪಣಂಬೂರು ಇವರು ಭಾಗವಹಿಸಿ ಧ್ವಜಾರೋಹಣ ನಡೆಸಿಕೊಟ್ಟರು. ಸಂಸ್ಥೆಯ ಪರವಾಗಿ ಅವರನ್ನು ಗೌರವಿಸಲಾಯಿತು. ನಂತರ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಶುಭಾಶಯ ಕೋರಿದರು ಹಾಗೂ ಸ್ವಾತಂತ್ರ್ಯ ಚಳುವಳಿಯ ಹಾಗೂ ಇತಿಹಾಸದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ನಾಗೇಶ್ ಟಿ.ಜಿ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯ ಅಧ್ಯಕ್ಷರಾದ ಸುಧಾಕರ ಆರ್ ಅಮೀನ್, ರಜತ ಸೇವಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಸ್ಟ್ಯಾನಿ ಡಿ ಕೋಸ್ತ, ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಹಿಮಕರ ಕದಿಕೆ, ಮಹಿಳಾ ಮಂಡಳಿಯ ಅಧ್ಯಕ್ಷರಾದ ರೇಷ್ಮಾ, ಯುವತಿ ಮಂಡಲದ ಅಧ್ಯಕ್ಷರಾದ ರಶ್ವಿತ ಶೆಟ್ಟಿ ಉಪಸ್ಥಿತರಿದ್ದರು. ಭಾಗವಹಿಸಿದ ಸರ್ವರಿಗೂ ಸಿಹಿತಿಂಡಿ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷರಾದ ನಾಗೇಶ್ ಟಿ ಜಿ ಸ್ವಾಗತಿಸಿದರು ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಕಾರ್ಯದರ್ಶಿ ಹಿಮಕರ್ ಕದಿಕೆ ವಂದಿಸಿದರು. ವಿದ್ಯಾ ವಿನಾಯಕ ಯುವಕ ಮಂಡಲದ ಸಲಹಾ ಸಮಿತಿಯ ಸದಸ್ಯರಾದ ಯೋಗೀಶ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.
ಯುವಕ ಮಂಡಲದ ಸದಸ್ಯರಾದ ನಿತ್ಯಾನಂದ ಇವರು ಧ್ವಜ ವಂದನಾ ಕಾರ್ಯಕ್ರಮ ನಡೆಸಿ ಕೊಟ್ಟರು. ಯುವತಿ ಮಂಡಲದ ಕುಮಾರಿ ನಿರ್ಮಿತ, ಕುಮಾರಿ ಕಾತ್ಯಾಯಿನಿ, ಕುಮಾರಿ ಪ್ರತೀಕ್ಷಾ, ಕುಮಾರಿ ನಿಶಾ, ಕುಮಾರಿ ಯಶಸ್ವಿ ದೇಶಭಕ್ತಿ ಗೀತೆ, ಭಾವಗೀತೆ ಹಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.







