ಮುಲ್ಕಿ: ಭಾರತ ಸರ್ಕಾರದ ನೆಹರು ಯುವ ಕೇಂದ್ರ ಮಂಗಳೂರು, ಗ್ರಾಮೀಣ ಮಾಹಿತಿ ತಂತ್ರಜ್ಞಾನ ಮತ್ತು ಅಭಿವೃದ್ಧಿ ಕೇಂದ್ರ, ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ (ರಿ.)ತೋಕೂರು, ರಜತ ಮಹೋತ್ಸವ ಸಮಿತಿ ಮಹಿಳಾ ಮಂಡಲ (ರಿ.) ತೋಕೂರು ಮತ್ತು ರೋಟರಿ ಸಮುದಾಯ ದಳ ತೋಕೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವವನ್ನು ನಿವೃತ್ತ ಭೂಸೇನಾ ಯೋಧರಾದ ಕೂಳೂರು ಪುಷ್ಪರಾಜ್ ಕುಮಾರ್ ರವರು ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು. ಸಮಾರಂಭದಲ್ಲಿ ಅವರನ್ನು ಗೌರವಿಸಿ ಸಮ್ಮಾನಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಮೂಲ್ಕಿಯ ಅಧ್ಯಕ್ಷರಾದ ಭುಜಂಗ ಬಿ ಕವತ್ತಾರ್ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಇಂದಿಗೂ ಗಡಿಯಲ್ಲಿ ದೇಶವನ್ನು ಕಾಯುವ ಯೋಧರು ತಮ್ಮ ಜೀವದ ಹಂಗು ತೊರೆದು ಪ್ರಾಣ ಪಣಕ್ಕಿಟ್ಟು ನಾಗರಿಕರ ರಕ್ಷಕರಾಗಿ ಸೇವೆಗೈಯುತ್ತಿದ್ದಾರೆ ಅಂತಹ ಸೇವಕರನ್ನು ಈ ಸಂದರ್ಭದಲ್ಲಿ ಗೌರವಿಸಿ ಸಮ್ಮಾನಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು. ರಜತ ಮಹೋತ್ಸವ ಸಮಿತಿ ಮಹಿಳಾ ಮಂಡಲ (ರಿ.)ತೋಕೂರು ವತಿಯಿಂದ ಆಯೋಜಿಸಲಾಗಿದ್ದ ದೇಶ ಭಕ್ತಿಗೀತೆ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಯಶೋದಾ ಪಿ ರಾವ್ , ಪಡಪಣಂಬೂರು ಗ್ರಾಮ ಪಂಚಾಯಿತಿನ ಉಪಾಧ್ಯಕ್ಷರು ಹಾಗೂ ರೋಟರಿ ಸಮುದಾಯ ದಳ ತೋಕೂರು ಇದರ ಅಧ್ಯಕ್ಷರಾದ ಹೇಮನಾಥ ಅಮೀನ್ ರೋಟರಿ ಕ್ಲಬ್ ಮೂಲ್ಕಿ ಇದರ ಮಾಜಿ ಅಧ್ಯಕ್ಷರಾದ ರೇಮಂಡ್ ರೆಬೆಲ್ಲೋ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಯುವಕ ಸಂಘದ ಅಧ್ಯಕ್ಷರಾದ ಶೇಖರ ಶೆಟ್ಟಿಗಾರ್ ಸ್ವಾಗತಿಸಿ, ಮಹಿಳಾ ಮಂಡಲದ ಅಧ್ಯಕ್ಷೆ ಅನುಪಮಾ ಎ ರಾವ್ ವಂದಿಸಿದರು. ಭುವನ್ ಡಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.




