ಜನ ಮನದ ನಾಡಿ ಮಿಡಿತ

Advertisement

ವಿಮಾನದಲ್ಲಿ ಹಾಟ್ ಚಾಕೊಲೇಟ್ ಸರ್ವ್ ಮಾಡುವಾಗ ಸಿಬ್ಬಂದಿಯ ಯಡವಟ್ಟು..! ಬಾಲಕಿ ಸ್ಥಿತಿ ಗಂಭೀರ..


ಚಲಿಸುತ್ತಿದ್ದ ವಿಮಾನದಲ್ಲಿ ಹಾಟ್ ಚಾಕೊಲೇಟ್ ಸರ್ವ್ ಮಾಡುವಾಗ 10 ವರ್ಷದ ಬಾಲಕಿ ಮೇಲೆ ಬಿದ್ದು, ಸುಟ್ಟು ಗಂಭೀರವಾಗಿ ಗಾಯಗೊಂಡಿರುವ ಘಟನೆ ‘ವಿಸ್ತಾರ’ ವಿಮಾನದಲ್ಲಿ ನಡೆದಿದೆ.
ಇದೀಗ ವಿಮಾನ ಸಂಸ್ಥೆ ‘ವಿಸ್ತಾರ’ ಗಾಯಗೊಂಡಿರುವ ಬಾಲಕಿ ಚಿಕಿತ್ಸೆಗೆ ತಗುಲುವ ಎಲ್ಲಾ ಖರ್ಚುಗಳ ಜವಾಬ್ದಾರಿ ತನ್ನದು ಎಂದು ವಿಮಾನ ಸಂಸ್ಥೆ ಹೇಳಿಕೊಂಡಿದೆ.


ಕಳೆದ ಬುಧವಾರ ವಿಸ್ತಾರ ಸಂಸ್ಥೆಯ UK25 ವಿಮಾನವು ದೆಹಲಿಯಿಂದ ಜರ್ಮನಿಯ ಫ್ರಂಕ್‌ಫುರ್ಟ್ಗೆ ಹೊರಟಿತ್ತು. ಇದೇ ವಿಮಾನದಲ್ಲಿ 10 ಬಾಲಕಿ ತನ್ನ ಪೋಷಕರೊಂದಿಗೆ ಪ್ರಯಾಣ ಮಾಡುತ್ತಿದ್ದಳು. ಬಾಲಕಿಯ ಪೋಷಕರು ಮಗಳಿಗೆ ಹಾಟ್ ಚಾಕೊಲೇಟ್ ನೀಡುವಂತೆ ವಿಮಾನದ ಸಿಬ್ಬಂದಿಗೆ ಹೇಳಿಕೊಂಡಿದ್ದಾರೆ. ಅಂತೆಯೇ ಚಾಕೊಲೇಟ್ ಸರ್ವ್ ಮಾಡಲು ವಿಮಾನದ ಸಿಬ್ಬಂದಿ ಅಲ್ಲಿಗೆ ಬಂದಿದ್ದರು. ಈ ವೇಳೆ ಆಕಸ್ಮಿಕವಾಗಿ ಹಾಟ್ ಚಾಕೊಲೇಟ್‌ನ ವಾಟರ್ ಆಕೆಯ ಮೇಲೆ ಬಿದ್ದಿದೆ.


ಕೂಡಲೇ ಆಕೆಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗೆ ಕರೆ ಮಾಡಲಾಗಿತ್ತು. ವಿಮಾನ ಫ್ರಂಕ್‌ಪುರ್ಟ್ನಲ್ಲಿ ಲ್ಯಾಂಡ್ ಆಗ್ತಿದ್ದಂತೆಯೇ, ಮೆಡಿಕಲ್ ಕೇರ್ ಟೀಂ ಅಲ್ಲಿಗೆ ಬಂದಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯ ಅಮ್ಮ ಕೂಡ ಆಸ್ಪತ್ರೆಗೆ ಬಂದಿದ್ದರು ಎಂದು ವಿಮಾನ ಸಂಸ್ಥೆ ಹೇಳಿಕೊಂಡಿದೆ.

ಘಟನೆ ನಡೆದು ಎರಡು ದಿನಗಳ ಬಳಿಕ ಟ್ವಿಟರ್‌ನಲ್ಲಿ ಈ ವಿಚಾರ ಸ್ಫೋಟಗೊಂಡಿತ್ತು. ರಚ್ನಾ ಗುಪ್ತಾ ಅನ್ನೋರು ಟ್ವೀಟ್ ಮಾಡಿ, ವಿಮಾನ ಸಂಸ್ಥೆಯ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ಘಟನೆ ಬಗ್ಗೆ ವಿಮಾನ ಸಂಸ್ಥೆ ಕನಿಷ್ಠ ವಿಷಾದ ಕೂಡ ವ್ಯಕ್ತಪಡಿಸಿಲ್ಲ ಎಂದು ಕಿಡಿಕಾರಿದ್ದರು. ಇದೀಗ ಪ್ರತಿಕ್ರಿಯಿಸಿರುವ ವಿಮಾನ ಸಂಸ್ಥೆ ವಿಸ್ತಾರ್.. ಕೂಡಲೇ ನಮ್ಮ ಸಿಬ್ಬಂದಿ ಘಟನೆಗೆ ಪ್ರತಿಕ್ರಿಯಿಸಿದ್ದಾರೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಿವಿ. ಆಕೆಗೆ ವೈದ್ಯಕೀಯ ವೆಚ್ಚಕ್ಕೆ ತಗಲುವ ಎಲ್ಲಾ ಖರ್ಚನ್ನು ಸಂಸ್ಥೆಯೇ ಬರಿಸಲಿದೆ ಎಂದು ಹೇಳಿಕೊಂಡಿದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!