ಬೆಳ್ಳಂಬೆಳಗ್ಗೆ ರಾಜ್ಯದ 18 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿದ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ.
ಹಲವು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಚಿತ್ರದರ‍್ಗ, ದಾವಣಗೆರೆ, ಕೊಡಗು ಸೇರಿದಂತೆ ಹಲವೆಡೆ ದಾಳಿಯಾಗಿದೆ. ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಇಂಜನಿಯರ್ ಕೆ.ಮಹೇಶ್, ಬಿಬಿಎಂಪಿ AE ಎಚ್. ಭಾರತಿ ಮನೆಯ ಮೇಲೆ ದಾಳಿಯಾಗಿದೆ.
ಚನ್ನಗಿರಿ ತಾಲೂಕಿನ ಆರ್‌ಎಫ್‌ಓ ಸತೀಶ್ ಮೇಲೆ ದಾಳಿಯಾಗಿದ್ದು, ಚನ್ನಗಿರಿಯಲ್ಲಿರೋ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಸತೀಶ್ 4 ವರ್ಷಕ್ಕೂ ಅಧಿಕ ಚನ್ನಗಿರಿಯಲ್ಲಿ ಆರ್‌ಎಫ್‌ಓ ಆಗಿ ಸೇವೆ ಸಲ್ಲಿಸುತಿದ್ದು, ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ ಆರೋಪ ಕೇಳಿ ಬಂದಿದೆ. ಕೊಡಗಿನಲ್ಲೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಕೊಡಗು ಎಡಿಸಿ ನಂಜುಂಡೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದಲ್ಲಿ ದಾಳಿಯಾಗಿದೆ. ಮೂವರು ಇನ್ಸ್ಪೆಕ್ಟರ್ ಮತ್ತು 10ಕ್ಕೂ ಹೆಚ್ಚು ಸಿಬ್ಬಂದಿ ಶೋಧಕರ‍್ಯ ಶುರುಮಾಡಿದ್ದಾರೆ.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…