‘ಜೈಲರ್’ ಅಭಿಮಾನಿಗಳ ತಲೈವಾ ರಜನಿಕಾಂತ್ ನಟನೆಯ ಸಿನಿಮಾ. ಈ ಸಿನಿಮಾ ಬಿಡುಗಡೆಗೊಂಡು ಇಂದಿಗೆ 7 ದಿನಗಳಾಯ್ತು.
ದಿನ ಕಳೆಯುತ್ತಿದ್ದಂತೆ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ ಈ ಸಿನಿಮಾ ವಿಶ್ವದಾದ್ಯಂತ 400 ಕೋಟಿ ಕಲೆಕ್ಷನ್ ಮಾಡಿ ಮುನ್ನುಗುತ್ತಿದೆ.
ಅಚ್ಚರಿ ಸಂಗತಿ ಎಂದರೆ ಸ್ವಾತಂತ್ರ‍್ಯ ದಿನಾಚರಣೆಯಂದು 200 ಕೋಟಿ ಕಲೆಕ್ಷನ್ ಮಾಡಿದೆ. 7ನೇ ದಿನಕ್ಕೆ 15 ಕೋಟಿ ಕಲೆಕ್ಷನ್ ಮಾಡಿರುವ ಈ ಸಿನಿಮಾ ಒಂದು ವಾರದಲ್ಲಿ 225.65 ಕೋಟಿ ರೂಪಾಯಿಯಷ್ಟು ಹಣವನ್ನು ಬಾಚಿಕೊಂಡಿದೆ.
ಅoದಹಾಗೆ, ತಮಿಳು ಚಿತ್ರರಂಗದ ಹಿಸ್ಟರಿಯಲ್ಲೇ ಕೇವಲ ನಾಲ್ಕು ಚಿತ್ರಗಳು ಮಾತ್ರ ಈ ಹಿಂದೆ 400 ಕೋಟಿ ರೂಪಾಯಿಗಳ ಗಡಿ ದಾಟಿವೆ. ರಜನಿಕಾಂತ್ ಅವರ 2.0 ಮತ್ತು ಕಬಾಲಿ, ಪೊನ್ನಿಯಿನ್ ಸೆಲ್ವನ್ ಮತ್ತು ವಿಕ್ರಂ ಸಿನಿಮಾಗಳು ಮಾತ್ರ 400 ಕೋಟಿ ಕಲೆಕ್ಷನ್ ಕ್ಲಬ್ ಸೇರಿವೆ.
ಇನ್ನು ಸಿನಿಮಾ ವಿತರಕ ಮನೋಬಾಲ ವಿಜಯಬಾಲನ್ ಪ್ರಕಾರ, ಜೈಲರ್ ಸಿನಿಮಾ ವಿಶ್ವದಾದ್ಯಂತ 450/80 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ದಿನವೇ 95.78 ಕೋಟಿ ರೂಪಾಯಿ ಬಾಚಿಕೊಂಡಿದೆ. ತಮಿಳು ನಾಡಿನಲ್ಲೇ ಒಟ್ಟು 159.02 ಕೋಟಿ ಗಳಿಸಿದೆ ಎಂದು ಹೇಳಿದ್ದಾರೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…