ಪಾಲಡ್ಕ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಅಮಿತ, ಉಪಾಧ್ಯಕ್ಷರಾಗಿ ಪ್ರವೀಣ್ ಸಿಕ್ವೇರಾ ಆಯ್ಕೆಯಾಗಿದ್ದಾರೆ.

ಪಂಚಾಯತ್‌ದ ಅಧ್ಯಕ್ಷ ಗಾದಿ ಅನುಸೂಚಿತ ಪಂಗಡ ಮಹಿಳೆಗೆ ಮೀಸಲಾಗಿದ್ದು, ಪಂಚಾಯತ್‌ದಲ್ಲಿದ್ದ ಏಕೈಕ ಮಹಿಳೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಪಾಲಾಗಿದೆ. ಆದರೆ ಉಪಾಧ್ಯಕ್ಷ ಸ್ಥಾನವು ಬಿಜೆಪಿ ಯೊಂದಿಗೆ ಒಡನಾಟದಲ್ಲಿದ್ದ ಪ್ರವೀಣ್ ಸಿಕ್ವೇರಾ ಅವರ ಪಾಲಾಗಿದ್ದರೂ ಇದೀಗ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ತಾನು ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವುದಾಗಿ ತಿಳಿಸಿದ್ದಾರೆ.
ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದೇ ಘೋಷಿಸಲ್ಪಟ್ಟಿದ್ದ ರಂಜಿತ್‌ರತಾಜ್‌ಗೆ ಸೋಲಾಗಿದೆ.



