ಪೆರ್ಲ : ಮಂಜೇಶ್ವರ ತಾಲೂಕು ಕಚೇರಿ ಡೆಪ್ಯೂಟಿ ತಹಶಿಲ್ದಾರ ಅರೆಮಂಗಿಲ ಸುಬ್ಬಣ್ಣ ನಾಯ್ಕ ಪಿ. (53) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ತಡ ರಾತ್ರಿ ನಿಧನರಾದರು. ತೀವ್ರ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದ ಇವರು ತಮ್ಮ ಸ್ವಗೃಹ ಅರೆಮಂಗಿಲದ ಮನೆಯಲ್ಲಿ ನಿಧನರಾಗಿದ್ದಾರೆ.
ಪಳ್ಳಕಾನ ನಿವಾಸಿಗಳಾಗಿದ್ದ ದಿ.ರಾಮನಾಯ್ಕ – ಕಾವೇರಿ ದಂಪತಿಗಳ ಪುತ್ರರಾಗಿದ್ದ ಸುಬ್ಬಣ್ಣ ನಾಯ್ಕ ಆರಂಭದಲ್ಲಿ ಕೆಎಸ್ಸಾರ್ಟಿಸಿ ಇಲಾಖೆಯಲ್ಲಿ ಸರಕಾರಿ ಸೇವೆಗೆ ನಿಯುಕ್ತರಾಗಿ ಬಳಿಕ ಕಂದಾಯ ಇಲಾಖೆಯ ವಿಲೇಜ್ ಆಫೀಸರ್ ಆಗಿ ವಿವಿಧ ಕಡೆಗಳಲ್ಲಿ ಸೇವೆಗೈದಿದ್ದಾರೆ. ಶೇಣಿ, ಪೆರ್ಲ, ಕಾಟುಕುಕ್ಕೆ, ಬಾಯಾರು, ಮೀಂಜ ಮೊದಲಾದ ಕಡೆಗಳಲ್ಲಿ ವಿಲೇಜ್ ಅಧಿಕಾರಿಯಾಗಿದ್ದ ಇವರು ಬಳಿಕ ಮಂಜೇಶ್ವರ ತಾಲೂಕು ಕಚೇರಿ ಡೆಪ್ಯೂಟಿ ತಹಶಿಲ್ದಾರ್ ಆಗಿ ಭಡ್ತಿ ಹೊಂದಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಭವಾನಿ, ಮಕ್ಕಳಾದ ಜಿತಿನ್ ಎಸ್, ನಿವೇದ್ ಹಾಗೂ ಸಹೋದರರಾದ ಈಶ್ವರ ನಾಯ್ಕ, ಗಣೇಶ (ಕೇರಳ ಗ್ರಾಮೀಣ ಬ್ಯಾಂಕ್ ಉದ್ಯೋಗಿ), ಸಹೋದರಿಯರಾದ ದೇವಕಿ, ಗೌರಿ ಎಂಬಿವರನ್ನಗಲಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…