ಕೇರಳದ ಕಾಸರಗೋಡಿನಿಂದ ಆಸ್ಪತ್ರೆ ತ್ಯಾಜ್ಯವನ್ನು ಕರ್ನಾಟಕ ವಾಹನ ಮೂಲಕ ಕರ್ನಾಟಕಕ್ಕೆ ತಂದು ನಿರ್ಜನ ಪ್ರದೇಶದಲ್ಲಿ ಸುರಿದು ಹೋಗುತ್ತಿದ್ದರು.
ಈ ದಂಧೆಯನ್ನು ಕಲ್ಲಡ್ಕ ಕಾಂಞoಗಾಡು ಹೆದ್ದಾರಿಯ ಉಕ್ಕುಡದಲ್ಲಿ ಸಾರ್ವಜನಿಕರು ಪತ್ತೆ ಹಚ್ಚಿದ್ದಾರೆ.
ಕೆಲವೇ ದಿನಗಳ ಹಿಂದೆ ಕೇಪು ಗ್ರಾಮ ಚೆಲ್ಲಡ್ಕ ಅಮೈ ಮಾರ್ಗದ ಬದಿಯಲ್ಲಿ ಇದೇ ರೀತಿ ತ್ಯಾಜ್ಯವನ್ನು ಸುರಿಯುತ್ತಿದ್ದಾಗ ಸ್ಥಳೀಯರು ಪತ್ತೆ ಹಚ್ಚಿ, ಪಂಚಾಯತ್ ವಿಟ್ಲ ಠಾಣೆಗೆ ದೂರು ನೀಡಿದರು.

ಆ ವಾಹನವನ್ನು ಬಿಡಿಸಿಕೊಂಡು ಬಂದು ಈಗ ಮತ್ತೆ ಕಾಸರಗೋಡು ಆಸ್ಪತ್ರೆಯಿಂದ ತ್ಯಾಜ್ಯವನ್ನು ತುಂಬಿ ಕರ್ನಾಟಕ ಬರುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ವಾಹನವನ್ನು ಬೆನ್ನಟ್ಟಿ ಬಂದಿಸಿದ್ದಾರೆನ್ನಲಾಗಿದೆ.
ಉಕ್ಕುಡದಲ್ಲಿ ವಾಹನವನ್ನು ಸಾರ್ವಜನಿಕರು ತಡೆಗಟ್ಟಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಹಲವು ಬಾರಿ ತ್ಯಾಜ್ಯವನ್ನು ತಂದಿರುವುದಾಗಿ ಚಾಲಕ ಸಾರ್ವಜನಿಕರಿಗೆ ತಿಳಿಸಿದ್ದಾರೆ.



