ಜನ ಮನದ ನಾಡಿ ಮಿಡಿತ

Advertisement

ಇದು ಇಂಡೋ-ಪಾಕ್ ಜೋಡಿ; ಮದುವೆ ಆಗಿದ್ದು ಮಾತ್ರ ವಿಡಿಯೋ ಕಾಲ್‌ನಲ್ಲಿ; ಹೇಗೆ ಅಂತೀರಾ ಇಲ್ಲಿದೆ ಸ್ಟೋರಿ..?!

ಇಂಡೋ, ಪಾಕ್ ವಧು- ವರರ ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ.
ರಾಜಸ್ಥಾನದ ಜೋಧ್‌ಪುರ ಮೂಲದ ಅರ್ಬಾಜ್ ಪಾಕಿಸ್ತಾನದ ಮೂಲದ ವಧು ಅಮೀನಾ ಅವರೊಂದಿಗೆ ವಿವಾಹವಾಗಿದ್ದಾರೆ.
ಎರಡೂ ಕುಟುಂಬದವರ ಸಹಮತದೊಂದಿಗೆ ಈ ವಿವಾಹ ನೆರವೇರಿದೆ. ವಿಶೇಷವೆಂದರೆ ವರ್ಚುವಲ್ ಮೂಲಕ ( ವಿಡಿಯೊ ಕಾಲ್) ವಿವಾಹ ಕಾರ್ಯಕ್ರಮ ನೆರವೇರಿದೆ.
ಲೈವ್ ಹಿಂದೂಸ್ತಾನ್ ವರದಿ ಮಾಡಿರುವ ಪ್ರಕಾರ ಅರ್ಬಾಜ್ ಹಾಗೂ ಅಮೀನಾ ಅವರ ಕುಟುಂಬ ಸಂಬAಧಿಗಳಾಗಿದ್ದಾರೆ. ಈ ಹಿಂದೆ ಅರ್ಬಾಜ್ ಅವರ ಕುಟುಂಬದ ವ್ಯಕ್ತಿಯೊಬ್ಬರು ಪಾಕಿಸ್ತಾನದಲ್ಲಿರುವ ಅಮೀನಾ ಅವರ ಕುಟುಂಬದ ಯುವತಿಯನ್ನು ಮದುವೆಯಾಗಿದ್ದಾರೆ.

“ನನ್ನ ಮೊಮ್ಮಗ ಚಾರ್ಟಡ್ ಅಕೌಂಟೆAಟ್ ಆಗಿದ್ದಾರೆ. ಪಾಕ್ ಮೂಲದ ಯುವತಿಯನ್ನು ವಿವಾಹವಾಗಿರುವ ಅವರ ಸಂತೋಷವನ್ನು ಅಮೀನಾ ಅವರ ಕುಟುಂಬದವರು ನೋಡಿ, ನನ್ನ ಮಗನನ್ನು ಅಮೀನಾ ಅವರಿಗೆ ಕೊಟ್ಟು ಮದುವೆ ಮಾಡಿಸಿ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ನಾವು ಒಪ್ಪಿ, ಈ ಮದುವೆಯನ್ನು ಮಾಡಿಸಿದ್ದೇವೆ” ಎಂದು ಅರ್ಬಾಜ್ ಅವರ ತಂದೆ ಮೊಹಮ್ಮದ್ ಅಫ್ಜಲ್ ಅವರು ಹೇಳುತ್ತಾರೆ.

ಅರ್ಬಾಜ್ ಅವರ ಮದುವೆ ದಿಬ್ಬಣ ಜೋಧ್‌ಪುರದ ಓಸ್ವಾಲ್ ಸಮಾಜ ಭವನಕ್ಕೆ ತೆರಳಿ, ಅಲ್ಲಿ ವರ್ಚುವಲ್ ಮೂಲಕ ಪಾಕ್ ನಲ್ಲಿರುವ ಅಮೀನಾ ಅವರೊಂದಿಗೆ ನಿಕಾ ಮಾಡಿಕೊಂಡಿದ್ದಾರೆ. ಅತ್ತ ಕಡೆಯ ಮೌಲ್ವಿ, ಇತ್ತ ಗಂಡಿನ ಕಡೆಯ ಮೌಲ್ವಿಗಳು ವಿವಾಹವನ್ನು ನೆರವೇರಿಸಿದ್ದಾರೆ.

ಈ ವರ್ಚುವಲ್ ಮದುವೆಗೂ ಮುನ್ನ ಅಮೀನಾ ಅವರು ವೀಸಾಕ್ಕಾಗಿ ಸರ್ಜಿ ಸಲ್ಲಿಸಿದ್ದರು. ಆದರೆ ಅದು ವಿಫಲವಾದ ಕಾರಣ. ವರ್ಚುವಲ್ ವಿವಾಹ ನೆರವೇರಿದೆ. ನಾನು ಪಾಕ್ ಗೆ ತೆರಳಿ ವಿವಾಹವಾಗಿಲ್ಲ. ಹಾಗೆ ಮಾಡಿದ್ದರೆ ಅದು ಮಾನ್ಯ ಆಗುತ್ತಿರಲಿಲ್ಲ. ನಮ್ಮ ವಿವಾಹದ ಪ್ರಮಾಣ ಪತ್ರವನ್ನು ಮೌಲ್ವಿಗಳಿಂದ ಪಡೆದುಕೊಂಡಿದ್ದೇವೆ. ಅಮೀನಾ ಅವರ ಭಾರತೀಯ ವೀಸಾ ಆದ ಬಳಿಕ ನಾವು ಮತ್ತೆ ಮರುಮದುವೆ ಆಗಲಿದ್ದೇವೆ ಎಂದು ವೃತ್ತಿಯಲ್ಲಿ ಡಿಟಿಪಿ ಆಪರೇಟರ್ ಆಗಿರುವ ಅರ್ಬಾಜ್ ಹೇಳುತ್ತಾರೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!