ಜನ ಮನದ ನಾಡಿ ಮಿಡಿತ

Advertisement

ಮಹಾಗನಿ ಮರ ರೈತನಿಗೆ ವರ, ಭಯವಿಲ್ಲ ರೋಗ ಉತ್ತಮ ಲಾಭ

ದಕ್ಷಿಣ ಕನ್ನಡ : ಕೃಷಿ ವಲಯದಲ್ಲಿ ಇತ್ತೀಚೆಗೆ ಹೊಸ ಹೊಸ ಸಂಶೋಧನೆಗಳು ಬರಲಾರಂಬಿಸಿವೆ, ಕೃಷಿಗೆ ಸಂಬಂಧಿಸಿದ ಹೊಸ ತಳಿ  ಹೊಸ ಬೇಸಾಯ ಕ್ರಮ, ಆಧುನಿಕ ಯಂತ್ರೋಪಕರಣಗಳ  ಬಳಕೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಹಕಾರ, ಸರ್ಕಾರದ ಹೊಸ ಹೊಸ ಯೋಜನೆಗಳು ಇವುಗಳೆಲ್ಲದರ ಸಹಾಯದಿಂದ ಕೃಷಿ ವಲಯ ಅಭಿವೃದ್ಧಿಯತ್ತ ಸಾಗುತ್ತಿದೆ.

  ಕೃಷಿಯಲ್ಲಿ ಸಾಂಪ್ರದಾಯಿಕ ಕೃಷಿ, ಆಧುನಿಕ ಕೃಷಿ, ಆಹಾರ ಉತ್ಪಾದನೆ ಮತ್ತು ವಾಣಿಜ್ಯಬೆಳೆಗಳು,ತೋಟಗಾರಿಕೆ ಮತ್ತು ಅರಣ್ಯ ಉತ್ಪತ್ತಿ, ಸಾವಯವ ಕೃಷಿಮತ್ತು ಆಧುನಿಕ ಕೃಷಿ, ಹಣ್ಣು ಹಂಪಲು ಮತ್ತು ದ್ವಿದಳ ಧಾನ್ಯಗಳು ಹೀಗೆ ಹತ್ತು ಹಲವು ವಿಧಗಳು.

          ಇಲ್ಲಿ ನಾವು ಹೇಳ್ತಾ ಇರೋದು ಮಹಾಗನಿ ಎಂಬ ವಾಣಿಜ್ಯ ಬೆಳೆ ಬಗ್ಗೆ ಮಹಾಗನಿ  ಮರ, ಬೀಜಗಳು ಮತ್ತು ಎಲೆಗಳು ಸೇರಿದಂತೆ  ಎಲ್ಲವನ್ನೂ ಬಳಸಲಾಗುತ್ತದೆ. ಒಳ್ಳೆ ಮಾರುಕಟ್ಟೆ ಇದೆ.

 ಇದರ  ಒಂದು ಮರದಿಂದ ನೀವು 30 ರಿಂದ 40  ಘನ ಅಡಿಗಳಷ್ಟು ಮರವನ್ನು ಪಡೆಯಬಹುದು. ಈ ಮೂಲಕ ನೀವು ಉತ್ತಮ ಲಾಭ  ಪಡೆಯಬಹುದು.

ಮಹೋಗಾನಿ ಮರದ ಬೆಲೆಯನ್ನು ಅದರ ಮರದ ಬಣ್ಣದಿಂದ ನಿರ್ಧರಿಸಲಾಗುತ್ತದೆ. ಅದರ ಮರದ ಬಣ್ಣವು ಕೆಂಪು ಮತ್ತು ಕಂದು ಬಣ್ಣಕ್ಕೆ ಇರುತ್ತದೆ. ಕೆಂಪು ಬಣ್ಣದ ಮರದ ಬೆಲೆ ಹೆಚ್ಚು, ಕಂದು ಬಣ್ಣದ ಮರದ ಬೆಲೆ ಸ್ವಲ್ಪ ಕಡಿಮೆ. ವಿಶೇಷವೆಂದರೆ, ಕಡಿಮೆ ನೀರು ಇರುವ ಬಂಜರು  ಸ್ಥಳಗಳಲ್ಲಿಯೂ ನೀವು ಈ ಮರವನ್ನು ಬೆಳೆಸಬಹುದು.

  ಮಹಾಗನಿ  ಮರ, ಎಲೆಗಳು ಮತ್ತು ಬೀಜಗಳು ತುಂಬಾ ಉಪಯುಕ್ತವಾಗಿವೆ. ಈ ಕಾರಣದಿಂದಾಗಿ ಈ ಮರವನ್ನು ಅಮೂಲ್ಯವೆಂದು ಪರಿಗಣಿಸಲಾಗಿದೆ. ಇದರ ಮರವು  ಗರಿಷ್ಠ  ತಾಪಮಾನ ತಡೆದುಕೊಳ್ಳಬಲ್ಲದು. ಆದ್ದರಿಂದ ಬಿಸಿಲು ಪ್ರದೇಶದಲ್ಲೂ ಬೆಳೆಯಬಹುದಾಗಿದೆ.

ಮರವು ತುಂಬಾ ಉತ್ತಮವಾಗಿದ್ದು, ಪೀಠೋಪಕರಣಗಳನ್ನು  ತಯಾರಿಸಲಾಗುತ್ತದೆ. ಇದರ ಎಲೆಗಳನ್ನು ಕ್ಯಾನ್ಸರ್, ರಕ್ತದೊತ್ತಡ ಮತ್ತು ಅಸ್ತಮಾ ಇತ್ಯಾದಿಗಳಿಗೆ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದಲ್ಲದೆ, ಇದರ ಎಲೆಗಳು ಮತ್ತು ಬೀಜಗಳನ್ನು ಸೊಳ್ಳೆಗಳನ್ನು ಕೊಲ್ಲಲು ಬಳಸುವ ಔಷಧಿಗಳಲ್ಲಿ ಬಳಸಲಾಗುತ್ತದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!