ದಕ್ಷಿಣ ಕನ್ನಡ : ಕೃಷಿ ವಲಯದಲ್ಲಿ ಇತ್ತೀಚೆಗೆ ಹೊಸ ಹೊಸ ಸಂಶೋಧನೆಗಳು ಬರಲಾರಂಬಿಸಿವೆ, ಕೃಷಿಗೆ ಸಂಬಂಧಿಸಿದ ಹೊಸ ತಳಿ ಹೊಸ ಬೇಸಾಯ ಕ್ರಮ, ಆಧುನಿಕ ಯಂತ್ರೋಪಕರಣಗಳ ಬಳಕೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಹಕಾರ, ಸರ್ಕಾರದ ಹೊಸ ಹೊಸ ಯೋಜನೆಗಳು ಇವುಗಳೆಲ್ಲದರ ಸಹಾಯದಿಂದ ಕೃಷಿ ವಲಯ ಅಭಿವೃದ್ಧಿಯತ್ತ ಸಾಗುತ್ತಿದೆ.
ಕೃಷಿಯಲ್ಲಿ ಸಾಂಪ್ರದಾಯಿಕ ಕೃಷಿ, ಆಧುನಿಕ ಕೃಷಿ, ಆಹಾರ ಉತ್ಪಾದನೆ ಮತ್ತು ವಾಣಿಜ್ಯಬೆಳೆಗಳು,ತೋಟಗಾರಿಕೆ ಮತ್ತು ಅರಣ್ಯ ಉತ್ಪತ್ತಿ, ಸಾವಯವ ಕೃಷಿಮತ್ತು ಆಧುನಿಕ ಕೃಷಿ, ಹಣ್ಣು ಹಂಪಲು ಮತ್ತು ದ್ವಿದಳ ಧಾನ್ಯಗಳು ಹೀಗೆ ಹತ್ತು ಹಲವು ವಿಧಗಳು.
ಇಲ್ಲಿ ನಾವು ಹೇಳ್ತಾ ಇರೋದು ಮಹಾಗನಿ ಎಂಬ ವಾಣಿಜ್ಯ ಬೆಳೆ ಬಗ್ಗೆ ಮಹಾಗನಿ ಮರ, ಬೀಜಗಳು ಮತ್ತು ಎಲೆಗಳು ಸೇರಿದಂತೆ ಎಲ್ಲವನ್ನೂ ಬಳಸಲಾಗುತ್ತದೆ. ಒಳ್ಳೆ ಮಾರುಕಟ್ಟೆ ಇದೆ.
ಇದರ ಒಂದು ಮರದಿಂದ ನೀವು 30 ರಿಂದ 40 ಘನ ಅಡಿಗಳಷ್ಟು ಮರವನ್ನು ಪಡೆಯಬಹುದು. ಈ ಮೂಲಕ ನೀವು ಉತ್ತಮ ಲಾಭ ಪಡೆಯಬಹುದು.
ಮಹೋಗಾನಿ ಮರದ ಬೆಲೆಯನ್ನು ಅದರ ಮರದ ಬಣ್ಣದಿಂದ ನಿರ್ಧರಿಸಲಾಗುತ್ತದೆ. ಅದರ ಮರದ ಬಣ್ಣವು ಕೆಂಪು ಮತ್ತು ಕಂದು ಬಣ್ಣಕ್ಕೆ ಇರುತ್ತದೆ. ಕೆಂಪು ಬಣ್ಣದ ಮರದ ಬೆಲೆ ಹೆಚ್ಚು, ಕಂದು ಬಣ್ಣದ ಮರದ ಬೆಲೆ ಸ್ವಲ್ಪ ಕಡಿಮೆ. ವಿಶೇಷವೆಂದರೆ, ಕಡಿಮೆ ನೀರು ಇರುವ ಬಂಜರು ಸ್ಥಳಗಳಲ್ಲಿಯೂ ನೀವು ಈ ಮರವನ್ನು ಬೆಳೆಸಬಹುದು.
ಮಹಾಗನಿ ಮರ, ಎಲೆಗಳು ಮತ್ತು ಬೀಜಗಳು ತುಂಬಾ ಉಪಯುಕ್ತವಾಗಿವೆ. ಈ ಕಾರಣದಿಂದಾಗಿ ಈ ಮರವನ್ನು ಅಮೂಲ್ಯವೆಂದು ಪರಿಗಣಿಸಲಾಗಿದೆ. ಇದರ ಮರವು ಗರಿಷ್ಠ ತಾಪಮಾನ ತಡೆದುಕೊಳ್ಳಬಲ್ಲದು. ಆದ್ದರಿಂದ ಬಿಸಿಲು ಪ್ರದೇಶದಲ್ಲೂ ಬೆಳೆಯಬಹುದಾಗಿದೆ.
ಮರವು ತುಂಬಾ ಉತ್ತಮವಾಗಿದ್ದು, ಪೀಠೋಪಕರಣಗಳನ್ನು ತಯಾರಿಸಲಾಗುತ್ತದೆ. ಇದರ ಎಲೆಗಳನ್ನು ಕ್ಯಾನ್ಸರ್, ರಕ್ತದೊತ್ತಡ ಮತ್ತು ಅಸ್ತಮಾ ಇತ್ಯಾದಿಗಳಿಗೆ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದಲ್ಲದೆ, ಇದರ ಎಲೆಗಳು ಮತ್ತು ಬೀಜಗಳನ್ನು ಸೊಳ್ಳೆಗಳನ್ನು ಕೊಲ್ಲಲು ಬಳಸುವ ಔಷಧಿಗಳಲ್ಲಿ ಬಳಸಲಾಗುತ್ತದೆ.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…