ಜನ ಮನದ ನಾಡಿ ಮಿಡಿತ

Advertisement

ಹ್ಯಾಕರ್‌ಗಳ ಮೋಸದಾಟಕ್ಕೆ ಸಿಲುಕಿ ರಿಯಾದ್‌ನಲ್ಲಿ ಜೈಲು ಪಾಲಾದ ಕಡಬದ ಚಂದ್ರಶೇಖರ್ ರಿಲೀಸ್ ಸಾಧ್ಯತೆ..!


ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿ ಹ್ಯಾಕರ್‌ಗಳ ಮೋಸದಾಟಕ್ಕೆ ಸಿಲುಕಿ ಜೈಲು ಪಾಲಾಗಿರುವ ಕಡಬ ಮೂಲದ ಊತ್ತೂರು ಗ್ರಾಮದ ಚಂದ್ರಶೇಖರ್ ಅವರ ಬಿಡುಗಡೆಯ ಸಾಧ್ಯತೆಯಿದೆ.
2022ರ ನವೆಂಬರ್‌ನಿoದ ಸೌದಿಯ ರಿಯಾದ್‌ನ ಜೈಲಿನಲ್ಲೇ ದಿನ ಕಳೆಯುವ ದುಸ್ಥಿತಿ ಬಂದಿದ್ದು, ಚಂದ್ರಶೇಖರ್ ಅವರ ವಿರುದ್ಧ ವಂಚನೆಯ ದೂರು ನೀಡಿದ ಮಹಿಳೆಗೆ ವಂಚನೆಯಾದ ಮೊತ್ತವನ್ನು ಪಾವತಿಸಿ ಎನ್‌ಒಸಿ ಪಡೆದು ಅದನ್ನು ಪೊಲೀಸ್ ಹಾಗೂ ಜೈಲಿಗೆ ನೀಡಬೇಕಾಗಿದೆ.


ಈ ಕೆಲಸವನ್ನು ರಿಯಾದ್‌ನಲ್ಲಿ ಅವರ ಮಿತ್ರರು ಸೇರಿ ಮಾಡುತ್ತಿದ್ದು, ಎನ್‌ಒಸಿ ಸಿಕ್ಕಿದ ಬಳಿಕ ಬಿಡುಗಡೆಯಾಗುವ ಸಾಧ್ಯತೆಯಿದೆ.
ಅಲ್ಪಾನರ್ ಸೆರಾಮಿಕ್ಸ್ ಎಂಬ ಕಂಪನಿಯಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ್ ಕಳೆದ ವರ್ಷ ಮೊಬೈಲ್ ಮತ್ತು ಸಿಮ್ ಖರೀದಿಗಾಗಿ ರಿಯಾದ್‌ನಲ್ಲಿರುವ ಮೊಬೈಲ್ ಅಂಗಡಿಯೊAದಕ್ಕೆ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಚಂದ್ರಶೇಖರ್ ಅವರಿಂದ 2 ಬಾರಿ ತಂಬ್ ಅನ್ನು ಪಡೆಯಲಾಗಿದೆ. ಒಂದು ವಾರದ ಬಳಿಕ ಆ ದೂರವಾಣಿ ಸಂಖ್ಯೆಗೆ ಅರೆಬೀಕ್ ಭಾಷೆಯಲ್ಲಿನ ಸಂದೇಶವೊoದು ಬಂದಿದ್ದು, ಸಂದೇಶವನ್ನು ಕ್ಲಿಕ್ ಮಾಡಿದ ಚಂದ್ರಶೇಖರ್ ಬಳಿ ಸಿಮ್ ಬಗ್ಗೆಗಿನ ಮಾಹಿತಿ ಹಾಗೂ ಓಟಿಪಿ ಯನ್ನು ಕೇಳಿದ್ದಾರೆ. ಓಟಿಪಿ ಹೇಳಿದ ಚಂದ್ರಶೇಖರ್ ಬಳಿಕ ತಮ್ಮ ಕೆಲಸಕ್ಕೆ ತೆರಳಿದ್ದಾರೆ. ಇದರ ಜತೆ ತಮ್ಮ ನಿಶ್ಚಿತಾರ್ಥ ಮತ್ತಿತ್ತರ ಕೆಲಸದಲ್ಲಿ ಮಗ್ನರಾಗಿದ್ದರು. ಈ ನಡುವೆ ಅಚಾನಕ್ ಆಗಿ ಒಂದು ದಿನ ಪೊಲೀಸರು ಏಕಾಏಕಿ ಚಂದ್ರಶೇಖರ್ ಅವರನ್ನು ಬಂಧಿಸಿದ್ದು, ಕುಟುಂಬಕ್ಕೆ ಬರಸಿಡಿಲು ಬಡಿದಂತಾಗುತ್ತದೆ.
ಚoದ್ರಶೇಖರ್ ಅವರಿಗೆ ತಿಳಿಯದಂತೆ ಅಲ್ಲಿ ಬ್ಯಾಂಕ್‌ವೊoದರಲ್ಲಿ ಅಕೌಂಟ್ ತೆರೆದಿದ್ದು, ಮತ್ತು ಅದೇ ದೇಶದ ಮಹಿಳೆಯೊಬ್ಬರ 22 ಸಾವಿರ ಈ ಖಾತೆಗೆ ಜಮೆಯಾಗಿ ಕೂಡಲೇ ಅದರಿಂದ ಬೇರೆ ಯಾವುದೋ ದೇಶಕ್ಕೆ ವರ್ಗಾವಣೆಯಾಗಿತ್ತು. ಹಣ ಕಳೆದುಕೊಂಡ ಮಹಿಳೆಯು ಚಂದ್ರಶೇಖರ್ ರವರ ಖಾತೆಗೆ ಜಮೆಯಾಗಿರುವುದನ್ನು ಗಮನಿಸಿ ಚಂದ್ರಶೇಖರ್ ಅವರ ಮೇಲೆ ದೂರನ್ನು ನೀಡಿದ್ದಾರೆ. ಹೀಗಾಗಿ ಪೊಲೀಸರು ಚಂದ್ರಶೇಖರ್ ಅವರನ್ನು ಬಂಧಿಸಿದ್ದಾರೆ.
ಹ್ಯಾಕರ್‌ಗಳ ಕುಕೃತ್ಯದಿಂದ ಚಂದ್ರಶೇಖರ್ ಅವರು ಜೈಲಿನಲ್ಲಿ ಬಂಧಿಯಾಗಿದ್ದಾರೆ. ಮಗನ ಆಗಮನಕ್ಕಾಗಿ ತಾಯಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅಲ್ಲದೆ ಮಗನನ್ನು ಬಿಡಿಸಿಕೊಳ್ಳಲು ಕಳೆದ 8 ತಿಂಗಳಿoದ ಒದ್ದಾಡುತ್ತಿದ್ದಾರೆ. ಇತ್ತ ಚಂದ್ರಶೇಖರ್ ದುಡಿಯುತ್ತಿದ್ದ ರಿಯಾದ್ ಕಂಪನಿಯೂ ಈ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದೆ ಅನ್ಯಾಯ ಮಾಡಿದೆ ಎಂದು ಚಂದ್ರಶೇಖರ್ ಅವರ ತಾಯಿ ಕಣ್ಣೀರಿಡುತ್ತಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!